Episodes
Saturday Oct 03, 2020
Ep104 - ಸಿಂಹವನ್ನು ಸೋಲಿಸಿದ ತೋಳ
Saturday Oct 03, 2020
Saturday Oct 03, 2020
ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ ತೋಳಕ್ಕೆ ನರಿಯ ಸ್ಥಾನ .
ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ .
Sunday Sep 27, 2020
Ep103 - ಸೋರೆಕಾಯಿ ಮಕ್ಕಳು( The Calabash Kids )
Sunday Sep 27, 2020
Sunday Sep 27, 2020
ಆಫ್ರಿಕಾದಲ್ಲಿ ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ ಹತ್ತು ಹಲವು ರೀತಿಯಲ್ಲಿ . ಅಡುಗೆಯಂತೂ ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ ಬಿಂದಿಗೆಯಾಗಿ , ಸಾಮಗ್ರಿ ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ .
ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ .
ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ ರೋಚಕ ಕತೆ ಕೇಳೋಣ .
Sunday Sep 20, 2020
Ep102 - ಹಕ್ಕಿಗಳ ರಾಜ ಯಾರು ?
Sunday Sep 20, 2020
Sunday Sep 20, 2020
ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ ಈ ಕತೆ
Saturday Sep 12, 2020
Ep101 - ಕತೆಗಳು ಹೇಗೆ ಹುಟ್ಟಿದವು?
Saturday Sep 12, 2020
Saturday Sep 12, 2020
ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು ಅರ್ಥ ಮಾಡಿಕೊಂಡ ಬಗೆಯನ್ನು ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ .
ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? ಹೆಚ್ಚು ತಿಳಿಯಲು ಈ ವಾರದ ಕತೆ ಕೇಳಿ .
Saturday Sep 05, 2020
Ep100 - ಅನಾಂಸಿ ಮತ್ತು ಮಾಯಾ ಮಡಿಕೆ
Saturday Sep 05, 2020
Saturday Sep 05, 2020
"ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ . ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ .
ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ .
Saturday Aug 29, 2020
Ep99 - ನಿದ್ರೆ ಬರದಿದ್ದ ರಾಜ
Saturday Aug 29, 2020
Saturday Aug 29, 2020
ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ರಾಜನೊಬ್ಬನ ಕತೆ . ರಾಜನಿಗೆ ಏನು ಮಾಡಿದರೂ ರಾತ್ರಿ ನಿದ್ರೆ ಬರುತ್ತಿರಲಿಲ್ಲ . ಎಷ್ಟೇ ಮದ್ದು , ಗುಳಿಗೆ ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ ಉಳಿದಿತ್ತು .
ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ?
"ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು .
Friday Aug 21, 2020
Repeat - ಶಮಂತಕ ಮಣಿಯ ಕತೆ
Friday Aug 21, 2020
Friday Aug 21, 2020
ಈ ಕಂತು ೨೦೧೯ ರ ಗಣೇಶ ಹಬ್ಬದ ಸಮಯದಲ್ಲಿ ಮಾಡಿದ ಕತೆ .
ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಶಮಂತಕ ಮಣಿಯ ಕತೆ .
Saturday Aug 08, 2020
Ep98 - ಸಿಂಹವನ್ನು ಸೋಲಿಸಿದ ಮೊಲದ ಕತೆ
Saturday Aug 08, 2020
Saturday Aug 08, 2020
ಏನು ? ಸಿಂಹದಂಥ ಬಲಿಷ್ಠ ಪ್ರಾಣಿ ಎಲ್ಲಿ ? ಮೊಲದಂಥ ಪೀಚು ಪ್ರಾಣಿ ಎಲ್ಲಿ ? ಆದರೂ ಸಿಂಹದ ಶಕ್ತಿಯ ಮುಂದೆ ಮೊಲದ ಯುಕ್ತಿಯೇ ಮೇಲಾಯಿತು .
ಒಂದೊಂದು ಸಲ ನಮ್ಮ ಮುಂದೆ ಕೆಟ್ಟದ್ದು ನಡೆಯುತ್ತಿದ್ದರೂ , ಅಸಹಾಯಕರಾಗುವುದು ಸಹಜ . ಅದರಲ್ಲೂ ಎದುರಾಳಿ ಬಲಿಷ್ಠನಾಗಿದ್ದರಂತೂ , ಇನ್ನೇನು ಎಲ್ಲ ಮುಗಿದೇ ಹೋಯಿತು ಅನ್ನಿಸುವಾಗ , ಈ ಕತೆ ಸ್ಫೂರ್ತಿ ಕೊಡುತ್ತದೆ .
Saturday Aug 01, 2020
Ep97 - ಟೋಪಿ ಮಾರುವವ ಹಾಗೂ ಮಂಗಗಳು
Saturday Aug 01, 2020
Saturday Aug 01, 2020
" ಟೋಪಿ ಬೇಕಾ ಟೋಪಿ " ಅಂತ ಕೂಗುತ್ತಾ ಬರುವ ಟೋಪಿ ಮಾರುವವನ ಕತೆ ಶಾಲೆಗಳಲ್ಲಿ ನಾಟಕದ ರೂಪದಲ್ಲೋ , ಪಠ್ಯದಲ್ಲೋ ನೋಡದವರು ಕಡಿಮೆ . ಈಗ ಈ ಕತೆಯನ್ನು ಈಗಿನ ಪುಟಾಣಿಗಳೂ ಕೇಳಬಹುದು .
ಟೋಪಿ ಮಾರುವವನ ಟೋಪಿಗಳನ್ನು ಚೇಷ್ಟೆ ಮಂಗಗಳು ಹೊತ್ತುಕೊಂಡು ಮರದ ಮೇಲೆ ಹತ್ತಿ ಕುಳಿತಾಗ ಟೋಪಿ ಮಾರುವವ ವಾಪಸ್ ಪಡೆಯೋದಕ್ಕೆ ಏನೆಲ್ಲಾ ಸಾಹಸ ಮಾಡಬೇಕಾಯ್ತು ಅನ್ನುವುದನ್ನು ಈ ಕತೆ ತಿಳಿ ಹಾಸ್ಯದೊಂದಿಗೆ ಹೇಳುತ್ತದೆ .
Saturday Jul 25, 2020
Ep96 - ಬಾಯಿಬಡುಕ ಆಮೆ ಮತ್ತು ಬಾತುಕೋಳಿಗಳು
Saturday Jul 25, 2020
Saturday Jul 25, 2020
ಮಾತು ಹಿತ , ಮಿತವಾಗಿರಬೇಕು ಅನ್ನುತ್ತಾರೆ . ಜತೆಗೆ ಸಮಯೋಚಿತವಾಗಿರಬೇಕು ಕೂಡ . ಸಲ್ಲದ ಜಾಗದಲ್ಲಿ ಬೇಡ ಮಾತುಗಳಾಡಿದರೆ ತೊಂದರೆ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ . ಸಹಾಯ ಬೇಕಾಗಿದ್ದ ಆಮೆಯೊಂದಕ್ಕೆ , ಬಾತುಕೋಳಿಗಳು ಸಹಾಯ ಮಾಡುವುದಕ್ಕೆ ಮೊದಲು ಒಂದು ಷರತ್ತು ಹಾಕಿದವು . ಆಮೇಲೆ ಏನಾಯ್ತು ಅನ್ನೋದನ್ನ ಕತೆಯಲ್ಲಿ ಕೇಳಿ .