Episodes
Saturday Jul 18, 2020
Ep95 - ಪಾರಿವಾಳ ಮತ್ತು ಇರುವೆಯ ಕತೆ
Saturday Jul 18, 2020
Saturday Jul 18, 2020
ಉಪಕಾರ ಮಾಡಿದವರನ್ನು ಇಂದಿಗೂ ಮರೆಯಬಾರದು ಅಂತ ಗಾದೆಯ ಹಾಗೆ , ಪುಟ್ಟ ಇರುವೆಯೂ , ದೊಡ್ಡ ಪಾರಿವಾಳವೂ ಒಬ್ಬರಿಗೊಬ್ಬರು ಉಪಕಾರ ಮಾಡಿದ್ದು ಹೇಗೆ . ? ಪುಟ್ಟ ಇರುವೆಯಿಂದ ದೊಡ್ಡ ಪಾರಿವಾಳಕ್ಕೆ ಆದ ಉಪಕಾರವಾದರೂ ಏನು . ? ಬನ್ನಿ, ಈ ಕತೆಯಲ್ಲಿ ತಿಳಿದುಕೊಳ್ಳೋಣ .
Saturday Jul 11, 2020
Ep94 - ಚಿನ್ನದ ಮೊಟ್ಟೆಯ ಕತೆ
Saturday Jul 11, 2020
Saturday Jul 11, 2020
ಮೊಟ್ಟೆ ಇಡುವ ಕೋಳಿ , ಬಾತು ಕೋಳಿಯ ಬಗ್ಗೆ ಕೇಳಿರ್ತೀರ , ಆದರೆ ಚಿನ್ನದ ಮೊಟ್ಟಿ ಇಡುವ ಬಾತು ಕೋಳಿಯ ಬಗ್ಗೆ ಕೇಳಿದ್ದೀರಾ ?
ಚಿನ್ನದ ಮೊಟ್ಟೆ ಇಡುವ ಬಾತು ಕೋಳಿಯನ್ನು ನೋಡಿ ರೈತನ ಹೆಂಡತಿ ಅಸೆ ಪಟ್ಟಿದ್ದೆ ಬೇರೆ , ಆದರೆ ಆದದ್ದೇ ಬೇರೆ .
ದುರಾಸೆ ಪಟ್ಟರೆ ದುಃಖ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ .
Saturday Jul 04, 2020
Ep93 - ಮರ ಕಡಿಯುವವನ ಕತೆ
Saturday Jul 04, 2020
Saturday Jul 04, 2020
ಈ ವಾರ ಮತ್ತೊಂದು ಜನಪ್ರಿಯ ಕತೆ " ಮರ ಕಡಿಯುವವನ ಕತೆ ". ಪಂಚತಂತ್ರದ ಕತೆಗಳು ಅಂದ ತಕ್ಷಣ ನೆನಪು ಬರುವ ಕತೆಗಳಲ್ಲಿ ಈ ಕತೆ ಪ್ರಮುಖವಾದದ್ದು .
ಪ್ರಾಮಾಣಿಕತೆ , ಸತ್ಯ ನಿಷ್ಠತೆ , ಸರಳತೆ ಅಂತಹ ಗುಣಗಳು ಈ ಕತೆಯಲ್ಲಿ ವಿಶೇಷವಾಗಿ ಕಾಣಸಿಗುತ್ತವೆ .
Saturday Jun 27, 2020
Ep92 – ತೋಳ ಮತ್ತು ಮೇಕೆ ಮರಿಯ ಕತೆ
Saturday Jun 27, 2020
Saturday Jun 27, 2020
ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು . ತೋಳ ಹೆದರಿ ಓಡಿದ್ದು ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ
Saturday Jun 27, 2020
Ep92 - ತೋಳ ಮತ್ತು ಮೇಕೆ ಮರಿಯ ಕತೆ
Saturday Jun 27, 2020
Saturday Jun 27, 2020
ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .
ತೋಳ ಹೆದರಿ ಓಡಿದ್ದು ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ .
Saturday Jun 20, 2020
Ep91 - ಆಮೆ ಮತ್ತು ಮೊಲದ ಕತೆ
Saturday Jun 20, 2020
Saturday Jun 20, 2020
ಇಂದಿನ ಸಂಚಿಕೆಯಲ್ಲಿ ಜನಪ್ರಿಯ ಕತೆ "ಆಮೆ ಮತ್ತು ಮೊಲ "ದ ಕತೆ .
ಪ್ರಪಂಚದ ನಾನಾ ಭಾಷೆಗಳಲ್ಲಿ ಹೇಳಪಡುವ ಈ ಕತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಕೇಳಿ ಖುಷಿ ಪಡಬಹುದಾದದ್ದು . ನೀವೂ ಕೇಳಿ , ಬೇರೆಯವರಿಗೂ ತಿಳಿಸಿ .
ಕತೆಯನ್ನು ಕೇಳುವ ಅನುಭವವನ್ನು ಇನ್ನಷ್ಟು ಹೆಚ್ಚುಗೊಳಿಸಲು , ಈ ಕತೆ ಇರುವ ಪುಸ್ತಕವನ್ನು ಮಕ್ಕಳಿಗೆ ಓದಿ ಹೇಳಿ . ನಂತರ , ನಮ್ಮ ವೆಬ್ಸೈಟ್ ನಲ್ಲಿರುವ ಚಿತ್ರ ಪುಟಗಳನ್ನು ಇಳಿಸಿಕೊಂಡು ಬಣ್ಣ ಹಚ್ಚಿ ಖುಷಿ ಪಡಿ .
Saturday Jun 13, 2020
Ep90-ನರಿ ಮತ್ತು ಡೊಳ್ಳು
Saturday Jun 13, 2020
Saturday Jun 13, 2020
ನರಿ ಮತ್ತು ಡೊಳ್ಳು, ಪಂಚತಂತ್ರದ ಜನಪ್ರಿಯ ಕತೆಗಳಲ್ಲೊಂದು .
ಕಾಡಿನಲ್ಲಿ ಬರುತ್ತಿದ್ದ ಸದ್ದು ಯಾವುದೋ ಭಯಂಕರ ಪ್ರಾಣಿಯದೇ ಇರಬೇಕು ಅಂತ ಹೆದರಿಕೆಯಿಂದ ಹೆಜ್ಜೆಯಿಡುತ್ತಿದ್ದ ನರಿಗೆ ಡೊಳ್ಳು ನೋಡಿ ಇಷ್ಟೇನಾ ಅಂತ ಅನ್ನಿಸಿತು .
ಆದರೆ , ಡೊಳ್ಳು ಬಡಿಯುತ್ತಿದ್ದವರು ಯಾರು ? ತಿಳಿಯಲು ಕತೆ ಕೇಳಿ
Sunday Jun 07, 2020
Ep89 - ಇನಿ ದನಿ - ಭಾಗ ನಾಲ್ಕು
Sunday Jun 07, 2020
Sunday Jun 07, 2020
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .
ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ತಾಯಿ ಶಾರದೆ " ಎಂಬ ಪದ್ಯ , "ಸರಕಾರೀ ಕನ್ನಡ ಶಾಲೆಯ " ಬಗ್ಗೆ ಒಂದು ಪುಟ್ಟ ಕತೆ , ಹಾಗೂ ಕೊನೆಯಲ್ಲಿ ಒಂದು ಸಂಭಾಷಣೆ.
"ಅಯ್ಯೋ , ಸರಕಾರೀ ಶಾಲೆಯೇ ? ಅಲ್ಲೇನಿದೆ ? ಅಲ್ಲಿಗೆ ಯಾಕೆ ಮಕ್ಕಳನ್ನು ಕಳಿಸಬೇಕು ?" ಅನ್ನುವ ಈಗಿನ ಪರಿಸ್ಥಿತಿಯಲ್ಲಿ ಈ ಶಾಲೆಯ ಮಕ್ಕಳು ತೋರಿಸಿರುವ ಕ್ರಿಯಾತ್ಮಕ ಶಕ್ತಿ , ಪ್ರತಿಭೆ ಈ ಆಡಿಯೋ ಸರಣಿಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ . "ಎಲ್ಲಾ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದರೆ ಎಷ್ಟು ಚಂದ ? " ಅನ್ನುವ ಪ್ರತಿಕ್ರಿಯೆಗಳು ಬಹಳಷ್ಟು ಬಂದಿವೆ .
ಈ ಕಂತು , "ಇನಿ ದನಿ " ಸರಣಿಯ ಕೊನೆಯ ಕಂತು . ನಡೆಸಿಕೊಟ್ಟ ಎಲ್ಲಾ ಮಕ್ಕಳಿಗೂ , ಶಿಕ್ಷಕರಿಗೂ ಅಭಿನಂದನೆಗಳು .
Saturday May 30, 2020
Ep88 - ಇನಿ ದನಿ - ಭಾಗ ಮೂರು
Saturday May 30, 2020
Saturday May 30, 2020
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .
ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ಮಂಗಳ ಗ್ರಹದಲ್ಲಿ ಪುಟ್ಟಿ " ಎಂಬ ಪದ್ಯ , "ಗಂಧರ್ವ ಸೇನಾ " ಅನ್ನುವ ಹಾಸ್ಯ ನಾಟಕ ನಡೆಸಿಕೊಡುತ್ತಾರೆ .
ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಹಾಗೂ ಮುದ್ದಾದ ಕಾವ್ಯ ವಾಚನ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .
Saturday May 16, 2020
Ep87 - ಇನಿ ದನಿ - ಭಾಗ ಎರಡು
Saturday May 16, 2020
Saturday May 16, 2020
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .
ಈ ವಾರದ ಕಾರ್ಯಕ್ರಮದಲ್ಲಿ "ಬೆಣ್ಣೆ ಕರಗಿತು " ಅನ್ನುವ ನಾಟಕ ನಡೆಸಿಕೊಡುತ್ತಾರೆ . ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .
ಕದ್ದು ತಂದ ಬೆಣ್ಣೆಯ ಸಲುವಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ಚಳ್ಳೆಹಣ್ಣು ತಿನಿಸುವ ಯೋಜನೆ ಮಾಡಿದ ಮಂಗಪ್ಪ ತಾನೇ ಪೇಚಿಗೆ ಸಿಕ್ಕಿದ ಈ ಕತೆ ಕೇಳೋಕೆ ಬಲು ಮೋಜು .