Episodes
Saturday Nov 23, 2019
Ep66 - ನಕ್ಸತ್ರಗಳು ಹುಟ್ಟಿದ ಕತೆ ( ಇಂಕಾ ಜಾನಪದ ಕತೆ )
Saturday Nov 23, 2019
Saturday Nov 23, 2019
ನಕ್ಷತ್ರಗಳು ಬಹಳ ಹಿಂದಿನಿಂದಲೂ ಮನುಷ್ಯರನ್ನು ಮೋಡಿ ಮಾಡಿವೆ . ಹೀಗಾಗಿ , ಜನಪದ ದಲ್ಲಿ ಅವುಗಳ ಹುಟ್ಟನ್ನು ವಿವರಿಸೋ ಅನೇಕ ಕತೆಗಳು ಹುಟ್ಟಿಕೊಂಡಿವೆ . ದಕ್ಷಿಣ ಅಮೆರಿಕಾದ ಇಂಕಾ ಜನಾಗದಲ್ಲಿ ಕೂಡ ಈ ಬಗ್ಗೆ ಒಂದು ಆಕರ್ಷಕ ವಿವರಣೆ ಈ ಸಲದ ಕತೆಯಲ್ಲಿ .
ಈ ಕತೆಯ ಮೂಲ :
https://www.folklore.ee/folklore/vol12/inca.htm
https://incadiscover.weebly.com/folk-tales.html
ಜ್ಞಾನ - ವಿಜ್ಞಾನ - ವಿನೋದ ಅಂಕಣದ ಪ್ರಶ್ನೆಗಳು :
೧. ಭೂಮಿಯ ಕತೆ Milkyway ಪುಂಜದಲ್ಲಿ ಯಾವ್ಯಾವ ಗ್ರಹಗಳಿವೆ ?
೨. ಆಕಾಶದಲ್ಲಿರುವ ಗ್ರಹಗಳು ಗಾಳಿಯಲ್ಲಿ ತೇಲುತ್ತಿರೋ ರೀತಿ ಕಾಣಿಸುತ್ತವೆ . ಆದರೂ , ಅವು ಕೆಳಗೆ ಬೀಳೋದಿಲ್ಲ ಯಾಕೆ ?
ನಿಮ್ಮ ಉತ್ತರ , ಮರು ಪ್ರಶ್ನೆಗಳನ್ನು ಆಡಿಯೋ ರಿಕಾರ್ಡಿಂಗ್ ಮೂಲಕ kelirondu@gmail.com ವಿಳಾಸಕ್ಕೆ ಇಮೇಲ್ ಕಳಿಸಿ .
Saturday Nov 16, 2019
Ep65 - ಚೆಸ್ಟ್ ನಟ್ ಮರದ ಕಥೆ
Saturday Nov 16, 2019
Saturday Nov 16, 2019
ಈ ಸಲದ ಕಥೆ ಜಪಾನ್ ದೇಶದ ಜಾನಪದ ಸಂಗ್ರಹದಿಂದ ಆಯ್ದುಕೊಂಡಿದ್ದು . ಆ ದೇಶದಲ್ಲಿ ಬೆಳೆಯುವ ಚೆಸ್ಟ್ ನಟ್ ಮರ ನೋಡಲು ಅತಿ ಸುಂದರ . ಮನುಷ್ಯರ ಹಾಗೂ ಮರಗಳ ನಡುವಿನ ಸಂಬಂಧವನ್ನು ಮಕ್ಕಳಿಗೆ ನಾಟುವ ಹಾಗೆ ಈ ಕಥೆ ಹಿಡಿದಿಡುತ್ತದೆ .
ಈ ವಾರ ಜ್ಞಾನ - ವಿಜ್ಞಾನ -ವಿನೋದ ಅಂಕಣದ ಪ್ರಶ್ನೆಗಳು -
೧. ದೋಣಿಗಳನ್ನು ಮಾಡಲು ಮರ / ಕಟ್ಟಿಗೆಯನ್ನ ಏಕೆ ಉಪಯೋಗಿಸ್ತಾರೆ ?
೨. ದಿನ ನಿತ್ಯದ ಓಡಾಟಕ್ಕೆ ದೋಣಿಗಳನ್ನಷ್ಟೇ ಉಪಯೋಗ ಮಾಡೋ ಊರುಗಳ ಬಗ್ಗೆ ತಿಳಿದುಕೊಳ್ಳಿ . ಗೊತ್ತಾದ ಮೇಲೆ, ನಮಗೆ kelirondu@gmail.com ಗೆ ಬರೆದು ತಿಳಿಸಿ.
Saturday Nov 09, 2019
[ Live Performance ] - ನಾಸ್ರುದ್ದೀನ್ ಹೂಡ್ಜ ಹಾಗೂ ಕಿಕ್ಕಿರಿದ ಮನೆ
Saturday Nov 09, 2019
Saturday Nov 09, 2019
ಕಳೆದ ವಾರ ಡಲ್ಲಾಸ್ ನಲ್ಲಿ ನಡೆದ ದೀಪಾವಳಿ ಸಮಾರಂಭದಲ್ಲಿ , "ಕೇಳಿರೊಂದು ಕಥೆಯ " ತಂಡ ಹಿಂದೆ ಪ್ರಕಟಿಸಿದ್ದ " ನಾಸ್ರುದ್ದೀನ್ ಹೊಡ್ಜ ಮತ್ತು ಕಿಕ್ಕಿರಿದ ಮನೆ " ಎಂಬ ಕಥೆಯನ್ನು ನಾಟಕದ ರೂಪದಲ್ಲಿ ಪ್ರದರ್ಶನ ನೀಡಿದ್ದರು .
ಆ ನಾಟಕದ ರಿಕಾರ್ಡಿಂಗ್ ಅನ್ನು ನಿಮ್ಮೊಡನೆ ಹಂಚಿಕೊಳ್ತಿದ್ದೇವೆ .
Saturday Nov 02, 2019
Ep64 - ಪಾರಿವಾಳ ಹಾಗೂ ಇಲಿಯ ಕಥೆ
Saturday Nov 02, 2019
Saturday Nov 02, 2019
ಆಗಸದಲ್ಲಿ ಹಾರುವ ಪಾರಿವಾಳಕ್ಕೂ , ಬಿಲದಲ್ಲಿರೋ ಪುಟ್ಟ ಇಲಿಗೂ ಎತ್ತಣ ಗೆಳೆತನ ? ಬೇಡನೊಬ್ಬ ಪಾರಿವಾಳಗಳನ್ನು ಬಲೆಯಲ್ಲಿ ಹಿಡಿದಾಗ , ಆ ಪುಟ್ಟ ಇಲಿಯೇ ರಕ್ಷಕನಗುವ ಈ ಕಥೆ , ಪಂಚತಂತ್ರದ ಅತಿ ಜನಪ್ರಿಯ ಕಥೆಗಳಲ್ಲೊಂದು .
Saturday Oct 26, 2019
Ep64 - ದೀಪಾವಳಿ ವಿಶೇಷ - 2019
Saturday Oct 26, 2019
Saturday Oct 26, 2019
ದೀಪಾವಳಿಯ ಶುಭಾಶಯಗಳು ಕೇಳುಗರೆಲ್ಲರಿಗೂ .
ವರ್ಷದ ವಿಶೇಷ ಭಾರತೀಯ ಹಬ್ಬಗಳ ಪರಿಚಯ ಕಥೆಗಳ ಮೂಲಕ "ಕೇಳಿರೊಂದು ಕಥೆಯ " ಮಾಡಿಸುತ್ತಿದೆ . ಶಿವರಾತ್ರಿ ಇಂದ ಶುರುವಾಗಿ , ಯುಗಾದಿ , ರಂಜಾನ್ , ಗಣೇಶ ಚತುರ್ಥಿ , ದಸರಾ ಹಬ್ಬಗಳ ನಂತರ ಬರುವುದೇ ದೀಪಾವಳಿ . ಬಹಳಷ್ಟು ಕನ್ನಡಿಗರಿಗೆ , ವರ್ಷದ ಅತಿ ದೊಡ್ಡ ಹಬ್ಬವೂ ಕೂಡ .
ದೀಪಾವಳಿಯ ಹಿಂದಿರುವ ಉಪಕಥೆಗಳ ಪರಿಚಯ ಮಾಡಿಸುತ್ತಲೇ ದೀಪಾವಳಿ ಮಹತ್ವ ವಿವರಿಸುವ ಪುಟ್ಟದೊಂದು ಪ್ರಯತ್ನ ಈ ವಾರದ ವಿಶೇಷ ಕಥೆ .
Source :
Naraka story : https://kathakids.com/mythological-stories-krishna-katha-narakasura-a-diwali-story-cec5714bc363
Bali story : https://www.hindu-blog.com/2009/10/bali-padyami-2009-date.html
ramayana story : https://www.mommyinme.com/diwali-story-for-kids-why-do-we-celebrate-diwali/
Image: https://www.pinterest.com/pin/672514156832684038/?lp=true
Saturday Oct 19, 2019
Ep63- ಟೋಪಿ ಮಾರುವವ ಹಾಗೂ ಕೋತಿಗಳು
Saturday Oct 19, 2019
Saturday Oct 19, 2019
ಕಳೆದ ವರ್ಷ ಮಾಡಿದ್ದ ಈ ಕಥೆ ನಮ್ಮ ಅತಿ ಜನಪ್ರಿಯ ಕಥೆಗಳಲ್ಲೊಂದು.!
ಟೋಪಿಗಳು ಸಾರ್ ಟೋಪಿಗಳು , ಅಂತ ಕೂಗುತ್ತಾ ಹೊರಟಿದ್ದ ಟೋಪಿ ಮಾರುವವನಿಗೆ, ಮರದಲ್ಲಿದ್ದ ಮಂಗಗಳು ತೊಂದರೆ ಕೊಟ್ಟಾಗ, ಟೋಪಿ ಮಾರುವವ ಸಿಟ್ಟಾಗದೆ, ಚಾಣಾಕ್ಷತನದಿಂದ ನಡೆದುಕೊಂಡ ಕಥೆ.
Friday Oct 11, 2019
Ep62 - ಕಲ್ಲಿನ ಕೋಟು
Friday Oct 11, 2019
Friday Oct 11, 2019
ಜಂಭಕೋರ ದರ್ಜಿ ( ಬಟ್ಟೆ ಹೊಲೆಯುವವನು ) , ಕಲ್ಲಿನ ಕೋಟು ಹೊಲೆಯುವ ರಾಜನ ಸವಾಲನ್ನು ನಡೆಸಿಕೊಟ್ಟದ್ದು ಹೇಗೆ ? ಇರಾಕ್ ದೇಶದ ಜನಪ್ರಿಯ ಜನಪದ ಕಥೆಗಳಲ್ಲಿ ಈ ಕಥೆಯೂ ಒಂದು .
Soundtrack:
"Odyssey" Kevin MacLeod
Licensed under Creative Commons: By Attribution 4.0
http://creativecommons.org/licenses/by/4.0/
Saturday Oct 05, 2019
Ep61 - ದಸರಾ ವಿಶೇಷ - ನವರಾತ್ರಿಯ ಕಥೆಗಳು
Saturday Oct 05, 2019
Saturday Oct 05, 2019
ನವರಾತ್ರಿ , ದಸರಾ ಅಂದ ಕೂಡಲೇ ಕನ್ನಡಿಗರಿಗೆ ನೆನಪಾಗುವುದು ಮೈಸೂರು ದಸರಾ ಹಾಗೂ ಅಂಬಾರಿ ಹೊತ್ತ ಆನೆ . ಶಿಷ್ಟರ ದೂಷಣೆ ಮಾಡುವ ದುಷ್ಟರಿಗೆ ಶಿಕ್ಷೆ ತಪ್ಪಿದ್ದಲ್ಲ ಅನ್ನುವ ಸಂದೇಶ ಸಾರುವ ನವರಾತ್ರಿಗೆ ಪುರಾಣದಲ್ಲಿ ಬಹಳಷ್ಟು ಉಪಕಥೆಗಳಿವೆ .
ಅವುಗಳಲ್ಲಿ ರಾಮಾಯಣ , ಮಹಾಭಾರತಗಳಿಂದ ಆಯ್ದ ಮೂರು ಜನಪ್ರಿಯ ಕಥೆಗಳನ್ನು ಈ ವಾರ ಕೇಳೋಣ .
Picture Credit: https://metrosaga.com/10-key-attractions-of-mysore-dasara/mysuru-dasara-cover/
Saturday Sep 28, 2019
Ep60 - ಮಾಯಾ ತಮಟೆ - ನೈಜೆರಿಯಾದ ಜನಪದ ಕತೆ
Saturday Sep 28, 2019
Saturday Sep 28, 2019
ಆಫ್ರಿಕಾದ ಸಲ್ಕಾಟ ಆಮೆಗಳು ( Sulcata Tortoise) ಅತಿ ದೊಡ್ಡ ಆಮೆ ಜಾತಿಗಳಲ್ಲಿ ಒಂದು . ಸಹಾರಾ ಮರಳುಗಾಡಿನಲ್ಲಿ ಬೆಳೆಯುವ ಕುರುಚಲು ಗಿಡ, ಹುಲ್ಲುಗಳನ್ನು ತಿಂದು 3 ಅಡಿಗೂ ಹೆಚ್ಚು ಉದ್ದ , 100 ಕೆಜಿ ಗೂ ಹೆಚ್ಚು ತೂಕ ಇರುತ್ತವೆ .
ಸಾಧಾರಣ ನೀರಿನ ಹತ್ತಿರ ಇರುವ ಆಮೆಗಳು ಮರುಭೂಮಿಯ ಹತ್ತಿರ ಹೇಗೆ ಬಂದವು ಅನ್ನುವುದಕ್ಕೆ ನೈಜೀರಿಯಾದ ಬುಡಕಟ್ಟು ಜನರು ಈ ಕಥೆ ಹೇಳುತ್ತಿದ್ದರಂತೆ .
ಪ್ರಕೃತಿಯಲ್ಲಿ ಕಾಣ ಸಿಗುವ ಗಿಡ , ಪ್ರಾಣಿ , ಪಕ್ಷಿ , ಕಲ್ಲು , ಗುಡ್ಡ ಹೀಗೆ ಪ್ರತಿಯೊಂದರ ಇರುವಿಕೆಗೂ ಕಥೆಗಳ ಮೂಲಕ ತಮ್ಮದೇ ರೀತಿಯಲ್ಲಿ ವಿವರಣೆ ಹೆಣೆಯುವ ಬುಡಕಟ್ಟು ಜನರ ಕಲ್ಪನೆ ಅದ್ಭುತ .
Sunday Sep 22, 2019
Ep59 - ಮಿದೋರಿ ಹಾಗೂ ಮಾಯಾ ಶಂಖ
Sunday Sep 22, 2019
Sunday Sep 22, 2019
ನೀವು ಕೇಳಿದ್ದೆಲ್ಲಾ ಕೊಡೊ ಜಿನೀ ಕತೆ ಕೇಳಿರ್ತೀರಿ . ಆದರೆ , ಈಗಿನ ಅಲೆಕ್ಸಾ , ಗೂಗಲ್ ಹೋಮ್ ತರಹ ಗೊತ್ತಿಲ್ಲದೇ ಇರೋ ರಹಸ್ಯಗಳನ್ನು ನೀವು ಕೇಳದೆಯೇ ಹೇಳುವ ಮಾಯಾ ಶಂಖದ ವಿಚಾರ ಕೇಳಿದ್ದೀರಾ ?
ಈ ವಾರದ ಕಥೆಯಲ್ಲಿ , ಅಂತಹ ಶಂಖ ಸಿಕ್ಕ ಮಿದೋರಿ ಅನ್ನೋ ಮೀನುಗಾರ , ಏನೆಲ್ಲಾ ಮಾಡಿದ ಅನ್ನೋ ಕಥೆ ಕೇಳೋಣ ?