Episodes
Sunday Mar 01, 2020
Ep76-ವಾಮನವತಾರ
Sunday Mar 01, 2020
Sunday Mar 01, 2020
"ದಶಾವತಾರ " ಸರಣಿಯಲ್ಲಿ ೫ನೇ ಅವತಾರ ವಿಷ್ಣು ಕುಳ್ಳ ಬ್ರಾಹ್ಮಣನ ಅವತಾರದಲ್ಲಿ ಬಂದು ಮಹಾ ದಾನವಂತ ಅನ್ನೋ ಅಹಂಕಾರ ದಿಂದ ಬೀಗುತ್ತಿದ್ದ ರಾಕ್ಷಸ ರಾಜ ಬಲಿ ಚಕ್ರವರ್ತಿಯ ಅಹಂಕಾರ ಮುರಿಯುತ್ತಾನೆ . ತಪ್ಪಿನ ಅರಿವಾದ ಬಲಿ ವಿಷ್ಣುವಿನ ಕ್ಷಮೆ ಕೇಳುತ್ತಾನೆ .
ಅಹಂಕಾರ ಸಲ್ಲದು ಹಾಗೂ ನಾವು ಎಷ್ಟೇ ದೊಡ್ಡವರಿದ್ದರೂ ತಪ್ಪಾದ ಕೂಡಲೇ ಒಪ್ಪಿಕೊಳ್ಳುವ ದೊಡ್ಡ ಗುಣ ಇರಬೇಕು ಅನ್ನುವ ನೀತಿ ಸಾರುವ ಈ ಕತೆ ದಶಾವತಾರದ ಕತೆಗಳಲ್ಲಿ ವಿಶಿಷ್ಟವಾದದ್ದು .
Sunday Feb 16, 2020
Ep75 - ನರಸಿಂಹಾವತಾರ
Sunday Feb 16, 2020
Sunday Feb 16, 2020
" ದಶಾವತಾರ " ಸರಣಿಯಲ್ಲಿನಾಲ್ಕನೇ ಅವತಾರ ನರಸಿಂಹಾವತಾರ
ಹಿರಣ್ಯಕಶಿಪುವಿನ ಮಗ ಪ್ರಹ್ಲಾದ , ವಿಷ್ಣುವಿನ ಮಹಾ ಭಕ್ತ .
ಹಿರಣ್ಯಕಶಿಪು ಎಲ್ಲ ಕಡೆ ತನ್ನನ್ನೇ ಪೂಜೆ ಮಾಡಬೇಕು ಅಂತ ದೇವತೆಗಳನ್ನು , ದೇವರ ಭಕ್ತರನ್ನು ಶಿಕ್ಷೆಗೆ ಗುರಿ ಮಾಡಿದಾಗ ವಿಷ್ಣು ಅರ್ಧ ಸಿಂಹ , ಅರ್ಧ ಮನುಷ್ಯನ ಅವತಾರದಲ್ಲಿ ಬಂದು ರಾಕ್ಷಸನಾದ ಹಿರಣ್ಯಕಶಿಪುವನ್ನ ಸಂಹಾರ ಮಾಡುತ್ತಾನೆ .
Saturday Feb 08, 2020
Ep74 - ವರಾಹಾವತಾರ
Saturday Feb 08, 2020
Saturday Feb 08, 2020
" ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ ವರಾಹಾವತಾರ .
ವರಾಹ ಅಂದರೆ ಕಾಡು ಹಂದಿ ಎಂದರ್ಥ . ಇಂಗ್ಲಿಷ್ನಲ್ಲಿ wild boar ಅಂತಲೂ ಕರೆಯುತ್ತಾರೆ . ವೈಕುಂಠದ ದ್ವಾರ ಪಾಲಕರಾದ ಜಯ - ವಿಜಯರು ಭೂಮಿಯ ಮೇಲೆ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪು ಎಂಬ ರಾಕ್ಷಸರಾಗಿ ಹುಟ್ಟುತ್ತಾರೆ .
" ಯಾವುದೇ ಮನುಷ್ಯ , ಪ್ರಾಣಿ , ದೇವತೆ , ರಾಕ್ಷಸನಿಂದ ಸಾವು ಬಾರದಿರಲಿ " ಬ್ರಹ್ಮನ ವಿಚಿತ್ರ ವರದಿಂದ ಹಿರಣ್ಯಾಕ್ಷ ಅಹಂಕಾರದಿಂದ ಸಿಕ್ಕಿದ್ದನ್ನು ದ್ವಂಸ ಮಾಡಿ ಭೂಮಿ ದೇವತೆಯನ್ನು ಪಾತಾಳಕ್ಕೆ ಕರೆದು ಹೋಗಿಬಿಡುತ್ತಾನೆ .
ವಿಷ್ಣು ವರಾಹ ಅವತಾರ ಧರಿಸಿ ಭೂಮಿ ದೇವತೆಯನ್ನ ಬಿಡಿಸುತ್ತಾನೆ .
Saturday Feb 01, 2020
Ep73 - ಕೂರ್ಮಾವತಾರ
Saturday Feb 01, 2020
Saturday Feb 01, 2020
" ದಶಾವತಾರ " ಸರಣಿಯಲ್ಲಿ ಎರಡನೇ ಅವತಾರ ಕೂರ್ಮಾವತಾರ .
ಕೂರ್ಮ ಅಥವಾ ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ .
ದೇವತೆಗಳಿಗೆ ಸಾವಿಲ್ಲದಂತೆ ಮಾಡುವ "ಅಮೃತ " ಪಡೆಯೋಕೆ ರಾಕ್ಷಸರು , ದೇವತೆಗಳಿಬ್ಬರೂ ಸಮುದ್ರ ಮಂಥನಕ್ಕೆ ನಿಂತಾಗ , ವಿಷ್ಣು ಕೂರ್ಮ ಅಥವಾ ಆಮೆಯ ರೂಪದಲ್ಲಿ ಬಂದು ದೇವತೆಗಳಿಗೆ ಅಮೃತ ಸಿಗುವ ಹಾಗೆ ಮಾಡುತ್ತಾನೆ .
Sunday Jan 26, 2020
Ep72 - ಮತ್ಸ್ಯಾವತಾರ
Sunday Jan 26, 2020
Sunday Jan 26, 2020
ಭಾರತೀಯ ಸಂಸ್ಕೃತಿಯ ಮಹಾನ್ ಅಸ್ತಿ ನಮ್ಮ ವೇದ-ಪುರಾಣಗಳು . ಅದರಲ್ಲೂ ವಿಷ್ಣುವಿನ ದಶಾವತಾರಗಳು ಕೆಟ್ಟದ್ದನ್ನು ಕೆಡವಿ ಒಳ್ಳೆಯದು ಒಂದಲ್ಲ ಒಂದು ರೂಪದಲ್ಲಿ ಬಂದೆ ಬರುತ್ತದೆ ಎನ್ನುವ ನಂಬಿಕೆಗೆ ಇಂಬು ಕೊಡುತ್ತವೆ .
ಮುಂದಿನ ಕೆಲವು ವಾರದಲ್ಲಿ , ಈ ದಶಾವತಾರದ ಕತೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತರುವ ಪ್ರಯತ್ನ ನಮ್ಮ ತಂಡ ಮಾಡುತ್ತಿದೆ .
ದಶಾವತಾರದ ಮೊದಲನೇ ಅವತಾರವೇ ಮತ್ಸ್ಯಾವತಾರ . ಮನುಷ್ಯ ಪೀಳಿಗೆಯ ಜ್ಞಾನವೆಲ್ಲವೂ ಅಡಗಿದ್ದ ವೇದಗಳನ್ನೇ ಕದಿಯಲು ಹೊರಟಿದ್ದ ಹಯಗ್ರೀವನೆಂಬ ರಾಕ್ಷಸನಿಗೆ ಬುದ್ದಿ ಕಲಿಸಲು ವಿಷ್ಣು ಮೀನಿನ ವೇಷದಲ್ಲಿ ಬಂದ ಎಂದು ಮತ್ಸ್ಯಪುರಾಣ ಹೇಳುತ್ತದೆ .
ಮೂಲ: ಅಮರ ಚಿತ್ರಕಥಾ ಪುಸ್ತಕಗಳು
ಉಚಿತವಾಗಿ ಕಥೆಗಳನ್ನು ಕೇಳಲು ಮಿಂದಾಣ - http://kelirondukatheya.org
Subscribe : https://podcasts.google.com/?feed=aHR0cDovL2tlbGlyb25kdWthdGhleWEub3JnL3Jzcw
ಹೊಸ ಕಥೆಗಳಿಗೆ Whatsapp ಗುಂಪಿಗೂ ಸೇರಬಹುದು: https://chat.whatsapp.com/GsWybXllVFC6INaXFcNSnQ
Background :
Mesmerize by Kevin MacLeod is licensed under a Creative Commons Attribution license (https://creativecommons.org/licenses/by/4.0/)
Source: http://incompetech.com/music/royalty-free/index.html?isrc=USUAN1500005
Artist: http://incompetech.com/
Sunday Jan 12, 2020
Ep 71 - [ವಿಶೇಷ ಕಾರ್ಯಕ್ರಮ ] - ಮಕ್ಕಳ ಕಲ್ಪನಾಶಕ್ತಿ
Sunday Jan 12, 2020
Sunday Jan 12, 2020
ಮಕ್ಕಳ ಕಲ್ಪನಾಶಕ್ತಿ ಯನ್ನು ಕೆರಳಿಸಲು 20 ಮೋಜಿನ ಪ್ರಶ್ನೆಗಳು
ಮಕ್ಕಳನ್ನು ಮಾತಾಡಿಸುವಾಗ , ಯಾವ ಶಾಲೆಗೇ ಹೋಗುತ್ತೀ , ಎಷ್ಟು ಮಾರ್ಕ್ಸ್ ತಗೊಂಡಿದ್ದೀ ಅಂತಹ ಪ್ರಶ್ನೆಗಳು ಸರ್ವೇ ಸಾಮಾನ್ಯ . ಮುಂದಿನ ಸಲ ಮಕ್ಕಳ ಜತೆ ಮಾತಾಡೋ ಅವಕಾಶ ಸಿಕ್ಕಾಗ ಈ ಕೆಳಗಿನ ಪ್ರಶ್ನೆಗಳನ್ನು ಕೇಳೋಕೆ ಪ್ರಯತ್ನ ಮಾಡಿ . ಅವರ ಉತ್ತರಗಳು ಅವರ ಯೋಚನಾ ಲಹರಿ , ವ್ಯಕ್ತಿತ್ವ್ , , ಕುತೂಹಲ, ಆಸಕ್ತಿಗಳನ್ನೂ ಕೂಡ ಬಿಚ್ಚಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ , ಪ್ರತಿಯೊಂದು ಮಗುವಿನೊಳಗಿರುವ ವಿಶೇಷತೆಯನ್ನ ಹೊರಗೆ ತರುತ್ತವೆ .
ನಿಮ್ಮ ಅನುಭವವನ್ನು ನಮ್ಮೊಡನೆ ಹಂಚಿಕೊಳ್ಳೋಕೆ ಮರೆಯಬೇಡಿ !
ಇನ್ನೂ ಕೆಲವು ಪ್ರಶ್ನೆಗಳು !
೧. ನಿನಗೆ ಕನಸು ಕಾಣೋದು ಅಂದ್ರೆ ಇಷ್ಟಾನ ? ನಿನ್ನ ಅಚ್ಚುಮೆಚ್ಚಿನ ಕನಸು ಯಾವುದು ?
೨. ನಿನಗೆ ಯಾವ ಕೆಲಸಗಳು ಮಾಡಿದ್ರೆ ಖುಷಿ ಆಗುತ್ತೆ ?
೩. ನಿನ್ನ ಗೆಳೆಯರು ಹೇಗಿದ್ದಾರೆ ? ಅವರಿಗೆ ಏನು ಮಾಡೋಕೆ ಇಷ್ಟ ?
೪. ಈ ಸದ್ಯ ನಿನಗೆ ಏನು ಬೇಕಾದ್ರೂ ಸಿಗೋದಾದ್ರೆ, ಏನು ಪಡೆಯಲಿ ಇಷ್ಟ ? ಅದರಿಂದ ಏನ್ಮಾಡ್ತಿಯಾ ?
೫. ನಿನ್ನ ಅಚ್ಚು ಮೆಚ್ಚಿನ ಕಾರ್ಟೂನ್ ಯಾವುದು ? ಅದರಲ್ಲಿ ಯಾವ ಪಾತ್ರ ನಿನಗೆ ತುಂಬಾ ಇಷ್ಟ ? ಯಾಕೆ ಇಷ್ಟ ?
೬. ನೀನು ಹೊಸ ಉದ್ಯಮ / ಅಂಗಡಿ ಶುರು ಮಾಡೋದಾದ್ರ್ ಯಾವ ಥರ ಉದ್ಯಮ / ಅಂಗಡಿ ಶುರು ಮಾಡ್ತೀಯ ?
೭. ನಿನಗೆ ಸೂಪರ್ ಮ್ಯಾನ್, ಸ್ಪೈಡೆರ್ ಮ್ಯಾನ್ ಥರ ಸೂಪರ್ ಹೀರೊ ನಿಮಗೆ ಇಷ್ಟಾನ ? ಹಾಗಾದರೇ, ನೀನು ಸೂಪರ್ ಹೀರೊ ಆಗಿದ್ರೆ, ನೀನು ಯಾವ ಹೆಸರಿಟ್ಟು ಕೊಳ್ತಿದ್ದೆ ? ನಿನಗೆ ಯಾವೆಲ್ಲ ವಿಶೇಷ ಶಕ್ತಿಗಳು ಬೇಕು?
೮. ನೀನು ಸಮುದ್ರಕ್ಕೆ ಹೋದೆ ಅಂತ ತಿಳಿದುಕೋ . ಎಲ್ಲದ್ದಕ್ಕಿಂತ ಮೊದಲು ಯಾವ ಆಟ ಆಡೋಕೆ ನಿನಗಿಷ್ಟ ?
೯. ನಿನಗೆ ಮನೆಯಲ್ಲಿ ಯಾವ ಗಿಡ ಬೆಳೆಸಲಿಕ್ಕೆ ಇಷ್ಟ ?
೧೦. .ನಿನ್ಹತ್ತಿರ ಆಟ ಸಾಮಾನುಗಳಿದ್ಯಲ್ಲ , ಅವು ಮಾತಾಡುವಂತಿದ್ದರೆ ಹೇಗಿರ್ತಿತ್ತು ? ಅವು ಏನು ಮಾತಾಡ್ತಿದ್ದವು ?
೧೧. ನಿನ್ಹತ್ತ್ರ ಬೇರೆಯವರಿಗೆ ಸಹಾಯ ಮಾಡೋಕೆ 1000 ರೂಪಾಯಿ ,ಇದ್ರೆ, ಯಾರಿಗೆ / ಏನು / ಯಾವ ಸಹಾಯ ಮಾಡ್ತೀ ?
೧೨. ನೀನೆ ಒಂದು ಪುಸ್ತಕ ಬರೆದೆ ಅಂತ ಇಟ್ಕೋ . ಯಾವುದರ ಬಗ್ಗೆ ಪುಸ್ತಕ ಬರೀತಿಯ ?
೧೩. ನಿನಗೆ ಯಾವ ಥರದ ತಿಂಡಿ ಇಷ್ಟ ? ನೀನು ನಿನ್ನದೇ ಹೋಟೆಲ್ ಒಂದು ತೆಗೆದಿದ್ದರೆ , ಏನೇನೊ ತಿಂಡಿ ಮಾಡ್ತಿಯಾ ನಿನ್ನ ಹೋಟೆಲ್ ನಲ್ಲಿ . ?
೧೪. ನಿನ್ಹತ್ರ ಒಂದು ಇಡೀ ದಿವಸ ತುಂಬಾ ಚೆನ್ನಾಗಿರೋ ಕ್ಯಾಮೆರಾ ಇದ್ರೆ , ಯಾವ / ಯಾರ ಫೋಟೋ ತೆಗೆಯುತ್ತಿ
೧೫. ನೀನು ವಿಜ್ಞಾನಿ ಆಗಿ ಏನಾದ್ರೂ ಕಂಡು ಹಿಡಿಯಬೇಕು ಅಂತ ಯೋಚಿಸಿದ್ಯಾ ? ಹಾಗಿದ್ದರೆ , ಏನು ಕಂಡು ಹಿಡಿಯೋದಕ್ಕೆ ಇಷ್ಟ ?
೧೬. ನಿನಗೆ ಶಾಲೆ ಗೆ ಹೋಗಬೇಕಾದ್ದೇ ಇಲ್ಲ ಅಂತ ಅಂದು ಕೊಳ್ಳೋಣ . ಆಗ ನೀನು ಏನು ಮಾಡುತ್ತೀ ?
೧೭. ನೀನು , ಶಿಕ್ಷಕ , ಅಥವಾ ಟೀಚರ್ ಆಗಿದ್ದೆ ಅಂದುಕೊಳ್ಳೋಣ . ಆಗ ಮಕ್ಕಳಿಗೆ , ಏನು ಕಲಿಸಲಿಕ್ಕೆ ಇಷ್ಟ ನಿನಗೆ ?
೧೮. ನಿನಗೆ ಯಾವ ಕಥೆ ಪುಸ್ತಕ ಇಷ್ಟ ? ಯಾವ ಪಾತ್ರ ಇಷ್ಟ ?
೧೯. ನಿನ್ನ ಬಗ್ಗೆ ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯ ಏನಾದ್ರೂ ನನಗೆ ಹೇಳ್ತಿಯ ?
Saturday Jan 04, 2020
Ep70 - ಎಮ್ಮೆಯೋ ಮೇಕೆಯೋ ?
Saturday Jan 04, 2020
Saturday Jan 04, 2020
ಈ ಕತೆ ಇಂಡೋನೇಷ್ಯಾ ದೇಶದ ಜಾನಪದ ಕತೆಗಳಿಂದ ಆಯ್ದುಕೊಂಡಿದ್ದು . ಕಳೆದ ಸಲದ “ಸೋಮಾರಿ ಸಿದ್ದ “ ನ ಹಾಗೆ , ಇನ್ನೂಬ್ಬ ಮುಗ್ದ ಮನುಷ್ಯನೊಬ್ಬನ ಕತೆ . ಮನೆಯಲ್ಲಿ ಕಷ್ಟ ಅಂತ ಇದ್ದೊಂದು ಎಮ್ಮೆಯನ್ನ ಮಾರಿ ಬನ್ನಿ ಅಂತ ಅವನ ಹೆಂಡತಿ ಕಳಿಸಿದರೆ , ಎಷ್ಟೆಲ್ಲಾ ಅವಾಂತರ ಮಾಡಿಕೊಂಡು ಬಂದ , ಮತ್ತು ಕೊನೆಯಲ್ಲಿ ಆಗಿದ್ದ ಮೋಸದಿಂದ ಹೇಗೆ ತಪ್ಪಿಸಿಕೊಂಡ ಅನ್ನೋ ಮೋಜಿನ ಕತೆ ಕೇಳೋಣ .
Sunday Dec 22, 2019
Ep69 - ಸೋಮಾರಿ ಸಿದ್ದ
Sunday Dec 22, 2019
Sunday Dec 22, 2019
ದಿನವಿಡೀ ನಿದ್ದೆ ಮಾಡುತ್ತಾ ಕಾಲ ಕಳೆಯುತ್ತಿದ್ದ ಸಿದ್ದ ರಾತ್ರೋ ರಾತ್ರಿ ಪ್ರಖ್ಯಾತ ಮಂತ್ರವಾದಿ ಅನ್ನಿಸಿಕೊಂಡು ಬಿಟ್ಟ . !
ತಿಳಿ ಹಾಸ್ಯದಿಂದ ಕೂಡಿದ ಈ ಕತೆ ನಿಮ್ಮನ್ನು ಹಾಗೂ ಮಕ್ಕಳನ್ನು ನಕ್ಕು ನಗಿಸುವುದು ಖಂಡಿತ .
ಹಾಗೆ , ಕಥೆಯ ಕೊನೆಯಲ್ಲಿ ಕೇಳಿದ "ಜ್ಞಾನ - ವಿಜ್ಞಾನ - ವಿಸ್ಮಯ " ಅಂಕಣದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದು ಕಳಿಸೋದನ್ನ ಮರೆಯಬೇಡಿ !
Sunday Dec 15, 2019
Ep68 - ಮೊಸಳೆ ಮತ್ತು ಮಂಗ್ಯಾನ ಕತಿ
Sunday Dec 15, 2019
Sunday Dec 15, 2019
ಕನ್ನಡದಾಗ ಭಾಳ ಉಪ ಭಾಷಾ ಇದ್ರೂ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಕಥೆ ಕೇಳೋ ಮಜಾನ ಬ್ಯಾರೆ . ಅದಕ್ಕಾ ಈ ಸಲದ ಕತಿ ಉತ್ತರ ಕರ್ನಾಟಕ ಭಾಷಾದಾಗ ಹೇಳಿ ಬಿಟ್ಟೇವಿ . ಕತಿ ಕೇಳ್ರಿ , ಮತ್ತ ನಿಮ್ಮ ಗೆಳೆಯಂದ್ರಿರಿಗೂ ಹೇಳ್ರಿ . ಹಂಗ ನಿಮಗ ಇನ್ನಷ್ಟು ಉತ್ತರ ಕರ್ನಾಟಕದ ಕತಿಗಳು ಕೇಳ್ಬೇಕು ಅನಸಿದ್ರ , ಯಾವ್ ಕತಿ ಬೇಕು ಅಂತ ಬರೆದು ಕಳಿಸ್ರಿ .
ಇದು ನಮ್ಮ ಹೊಸ ಪ್ರಯತ್ನ ,ನಿಮ್ಮ ಅನಿಸಿಕೆಗಳಿಂದ ನಮಗೆ ಈ ತರಹದ ಹೊಸ ಪ್ರಯತ್ನ ಗಳನ್ನ ಮಾಡಲು ಸ್ಪೂರ್ತಿ ಸಿಗುತ್ತದೆ .
Sunday Dec 08, 2019
Ep67 - ರೇಷ್ಮೆ ವ್ಯಾಪಾರಿಯ ಚಿಂತೆ
Sunday Dec 08, 2019
Sunday Dec 08, 2019
ನಾವು ರಜೆಗೆ ಬೇರೆ ಊರಿಗೆ ಹೋಗ ಬೇಕಾದಾಗ ಕಾಡೋ ಚಿಂತೆ "ಮನೆ ಅಷ್ಟು ದಿವಸ ಬೀಗ ಹಾಕಿ ಹೋಗೋದು ಹೇಗಪ್ಪಾ ? " ಅನ್ನೋದು .
ಈ ಕತೆಯಲ್ಲೂ ಕೂಡ ವ್ಯಾಪಾರಕ್ಕಾಗಿ ಬೇರೆ ಊರಿಗೆ ಹೊರಟಿದ್ದ ವಿಷ್ಣುವಿಗೂ ಅದೇ ಚಿಂತೆ . ! . ಈ ಸಮಸ್ಯೆಗೆ ವಿಷ್ಣು ಏನು ಪರಿಹಾರ ಹುಡುಕ್ತಾನೆ ಕೇಳೋಣ ?
ಜ್ಞಾನ - ವಿಜ್ಞಾನ - ವಿನೋದ :
ಮಕ್ಕಳೇ, ಈ ಕತೆಯಲ್ಲಿ ಬಂದಿರೋ ನೇರಳೆ ಮರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಸ್ಥಾನ ಇದೆ. ಇಂಗ್ಲಿಷ್ನಲ್ಲಿ Black plum ಅಥವಾ Jamun ಅಂತ ಕೂಡ ಕರೀತಾರೆ.ನೇರಳೆ ಹಣ್ಣು ಸಕ್ಕರೆ ಖಾಯಿಲೆ, ಅಥವಾ Diabetes ನಿಯಂತ್ರಣ ಮಾಡೋಕೆ ಹೇಳಿ ಮಾಡಿಸಿದ್ದು ಅಂತ ವಿಜ್ಞಾನಿಗಳು ಹೇಳ್ತಾರೆ.
ನೇರಳೆ ಹಣ್ಣು ತಿನ್ನೋದರಿಂದ ಮತ್ಯಾವ ಖಾಯಿಲೆಗಳು ಕಡಿಮೆ ಆಗುತ್ಯವೆ ಅಂತ ತಿಳಿದು ನಮಗೆ ಬರೆದು ತಿಳಿಸಿ.
ಹಾಗೆ, ಈ ಸಲದ ಕತೆಯಲ್ಲಿ ಎರಡು ಅತಿ ಹಳೆಯ , ಹಾಗೂವ್ ಪ್ರಸಿದ್ಧ ಊರುಗಳ ಪರಿಚಯ ಮಾಡಿಕೊಂಡ್ವಿ - ಪರ್ಷಿಯಾ ಹಾಗೂ ಬನಾರಸ್. ಈ ಊರುಗಳು ಈಗಲೂ ಇವೆ. ಇವುಗಳ ಈಗಿನ ಹೆಸರು ಏನು, ಹಾಗೂ ಈ ಪ್ರದೇಶಗಳು ಏಕೆ ಪ್ರಸಿದ್ಧ ಆಗಿದ್ವು ಅನ್ನೋದನ್ನ ತಿಳಿದು, ನಮಗೆ ಆಡಿಯೋ , ಪತ್ರದ ಮೂಲಕ ತಿಳಿಸ್ತೀರಾ ?
ನಿಮ್ಮ ಕಲಿಕೆಗೆ ಈ ಕೆಳಗಿನ ಮಿಂದಾಣ ( Website) ಗಳು ಸಹಾಯವಾಗಬಹುದು .
https://www.webmd.com/vitamins/ai/ingredientmono-530/jambolan
https://www.acupuncturetoday.com/herbcentral/black_plum.php
https://en.wikipedia.org/wiki/Persian_Empire
https://en.wikipedia.org/wiki/Varanasi