Episodes
Sunday May 10, 2020
Ep86 - ಇನಿ ದನಿ - ಭಾಗ ಒಂದು
Sunday May 10, 2020
Sunday May 10, 2020
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ . ಈ ವಾರದ ಕಾರ್ಯಕ್ರಮದಲ್ಲಿ ಚೂಟಿ ಮಕ್ಕಳಿಂದ ಪುಟ್ಟ ಹಾಡು , ಕಥೆ ನಿರೂಪಣೆ , ನಾಟಕ , ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲವು ಮಾತುಗಳು.
" ಕೇಳಿರೊಂದು ಕಥೆಯ " ತಂಡಕ್ಕೆ ಇದೊಂದು ವಿನೂತನ ಪ್ರಯತ್ನ . ನೀವೂ ಕೇಳಿ , ನಿಮ್ಮ ಮಕ್ಕಳಿಗೂ ಕೇಳಿಸಿ . ಈ ಕಾರ್ಯಕ್ರಮ ಕೇಳಿದ ಮೇಲೆ , ನಿಮ್ಮ ಮಕ್ಕಳೂ "ಅಮ್ಮಾ , ನಾನೂ ಕಥೆ ಹೇಳ್ತೇನೆ " ಅಂತ ಹೇಳಬಹುದು .
ನಿಮ್ಮೆಲ್ಲ ಬೆಂಬಲಕ್ಕಾಗಿ ಧನ್ಯವಾದಗಳು
.
Saturday May 02, 2020
Ep85 - ವಿಶೇಷ - ಮಕ್ಕಳಿಗಾಗಿ ಡಾ . ರಾಜ್ ಕುಮಾರ್
Saturday May 02, 2020
Saturday May 02, 2020
ಕಳೆದ ಶುಕ್ರವಾರ , ಏಪ್ರಿಲ್ ೨೪ , ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬ . ಸದಭಿರುಚಿಯ ಚಲನಚಿತ್ರಗಳ ಮೂಲಕ ಅಷ್ಟೇ ಅಲ್ಲ , ಕನ್ನಡಿಗರ ದನಿಯಾಗಿ , ಮಾನವತಾವಾದಿಯಾಗಿ ರಾಜ್ ಕುಮಾರ್ ಕನ್ನಡಿಗರಿಗೆ ಚಿರಪರಿಚಯ .
1990 ರಿಂದ ಮುಂಚೆ ಹುಟ್ಟಿದ ಕನ್ನಡಿಗರಿಗೆ ರಾಜ್ ಕುಮಾರ್ ಪರಿಚಯವೇ ಬೇಡ . ಆದರೆ , ಮಕ್ಕಳಿಗೆ ರಾಜಕುಮಾರ್ ಅವರ ಪರಿಚಯ ಮಾಡುವ ಪ್ರಯತ್ನ ಆದಂತಿಲ್ಲ .
ರಾಜಕುಮಾರ್ ಹುಟ್ಟುಹಬ್ಬದ ನೆನಪಿನಲ್ಲಿ , " ಮಕ್ಕಳಿಗಾಗಿ ಡಾ ರಾಜಕುಮಾರ್ " , ಅವರ ವ್ಯಕ್ತಿತ್ವದ ಕಿರು ಪರಿಚಯ , ಪುಟ್ಟ ಮಕ್ಕಳಿಗಾಗಿ .
Saturday Apr 25, 2020
Ep84 - ಭಗೀರಥ ಪ್ರಯತ್ನ
Saturday Apr 25, 2020
Saturday Apr 25, 2020
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಜೀವಿ , ವಸ್ತುವಿಗೂ ಒಂದು ಸ್ವಾರಸ್ಯಕರ ಕತೆಯುಂಟು . ಕಾಡಿನಲ್ಲಿ ಬಿದ್ದಿರುವ ಬಳ್ಳಿಗೊಂದು ಕತೆ , ದೂರದಲ್ಲಿ ಕಾಣುವ ಬಂಡೆಗೂ ಒಂದು ಕತೆ . ಇಷ್ಟಿದ್ದಾಗ , ಭಾರತದ ಪವಿತ್ರ ನದಿ ಗಂಗೆಗೂ ಒಂದು ಕತೆ ಇರಲೇ ಬೇಕಲ್ವೆ ?
Saturday Apr 18, 2020
Ep83 - ಭೀಮ ಹಾಗೂ ಹನುಮಂತ
Saturday Apr 18, 2020
Saturday Apr 18, 2020
ಮಹಾಭಾರತದಲ್ಲಿ ಬರುವ ಅಪೂರ್ವ ಪಾತ್ರ ಹನುಮಂತ . ಹನುಮಂತ ಹಾಗೂ ಭೀಮ ಪರಸ್ಪರ ಭೇಟಿಯಾಗಿ , ಹನುಮಂತ ಭೀಮನ ಜತೆ ಕುಚೇಷ್ಟೆ ಮಾಡುವ ಕತೆ ಓದುವುದಕಷ್ಟೇ ಅಲ್ಲ , ಕೇಳುವುದಕ್ಕೂ ಬಹಳ ಚಂದ .
Saturday Apr 11, 2020
Ep82 - ವಿಷ್ಣುವಿನ ಇತರ ಅವತಾರಗಳು
Saturday Apr 11, 2020
Saturday Apr 11, 2020
ದಶಾವತಾರ ಸರಣಿಯನ್ನು ಮಾಡ ಹೊರಟಾಗ , ವಿಷ್ಣುವಿನ ಹತ್ತು ಅವತಾರಗಳಷ್ಟೇ ಅಂತ ಅಂದು ಕೊಂಡಿದ್ದೆವು . ಪ್ರತಿ ಅವತಾರದ ಕತೆ ಬರೆಯುತ್ತಾ ಹೋದಾಗ , ತಿಳಿದದ್ದು ವೇದ , ಪುರಾಣಗಳಲ್ಲಿ , ವಿಷ್ಣುವಿನ 35ಕ್ಕೂ ಅವತಾರಗಳಿವೆ ಅಂತ .
"ದಶಾವತಾರ " ಸರಣಿಯ ಕೊನೆಯ ಕಂತಿನಲ್ಲಿ , ಇತರ ಕೆಲವು ಅವತಾರಗಳ ಕಿರು ಪರಿಚಯ.
Saturday Apr 04, 2020
Ep81 - ಗೌತಮ ಬುದ್ಧ
Saturday Apr 04, 2020
Saturday Apr 04, 2020
ದಶಾವತಾರದ ಸುಮಾರು ಅವತರಣಿಕೆ ( versions) ಗಳಲ್ಲಿ ಬುದ್ಧ ಹತ್ತು ಅವತಾರಗಳಲ್ಲಿ ಒಂದು ಪರಿಗಣಿಸುತ್ತಾರೆ . ಈ ಕಂತಿನಲ್ಲಿ ಗೌತಮ ಬುದ್ಧನ ಕಿರು ಪರಿಚಯ ಹಾಗೂ ಬುದ್ಧ ಹುಡುಗನಾಗಿದ್ದ ಸಮಯದ ಒಂದು ಪುಟ್ಟ ಕತೆಯನ್ನು ಹೇಳಲಾಗಿದೆ.
Photo Courtesy - Pari's Photography
Saturday Mar 28, 2020
Ep80 - Special Episode - ಏನಿದು ಕೊರೊನ ವೈರಸ್
Saturday Mar 28, 2020
Saturday Mar 28, 2020
A special episode about the mysterious Corona Virus ( COVID19) featuring Dr. Prakash and Dr. Sumana Kabbur , where we answer some questions sent by our young listeners.
ಕೊರೊನ ವೈರಸ್ ಬಗ್ಗೆ ನಮ್ಮ ಪುಟಾಣಿ ಕೇಳುಗರು ಕಳಿಸಿದ ಪ್ರಶ್ನೆಗಳಿಗೆ ಈ ಕಂತಿನಲ್ಲಿ ಡಾ . ಪ್ರಕಾಶ್ ಹಾಗೂ ಡಾ . ಸುಮನಾ ಕಬ್ಬೂರ್ ಅವರು ಉತ್ತರಿಸಿದ್ದಾರೆ .
ಮನೆಯೊಳಗೆ ಪಾಲಿಸಬಹುದಾದ ಮಾದರಿ ವೇಳಾಪಟ್ಟಿ ಇಲ್ಲಿದೆ .
To learn more about the amazing job TrainAndHelp Babies is doing to increase newborn survival rate , visit https://www.trainandhelpbabies.com/.
Saturday Mar 21, 2020
Ep79 - ಕೃಷ್ಣಾವತಾರ
Saturday Mar 21, 2020
Saturday Mar 21, 2020
" ದಶಾವತಾರ " ಸರಣಿಯ ಎಂಟನೆಯ ಅವತಾರ ಶ್ರೀ ಕೃಷ್ಣನ ಅವತಾರ . ರಾಮ, ಕೃಷ್ಣರ ಕತೆಗಳು ಪ್ರತಿಯೊಬ್ಬರಿಗೂ ಚಿರ ಪರಿಚಿತ . ಕೃಷ್ಣನ ಜೀವನ ಚರಿತ್ರೆಯನ್ನು ಸರಳವಾಗಿ , ಚೊಕ್ಕವಾಗಿ ಈ ಕತೆಯಲ್ಲಿ ಮುಂದಿಡಲಾಗಿದೆ .
Saturday Mar 14, 2020
Ep78 - ರಾಮನ ಅವತಾರ
Saturday Mar 14, 2020
Saturday Mar 14, 2020
" ದಶಾವತಾರ " ಸರಣಿಯ ಏಳನೇ ಕಂತು ರಾಮನ ಅವತಾರ .
ರಾಮಾಯಣ , ಮನೆ ಮನೆಯ ದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಮಹಾ ಕಾವ್ಯ . ದೇವರ ಮನೆಯ ಪೂಜೆಯಿಂದ ಹಿಡಿದು , ಕುಳಿತಾಗೊಂದು ಸಲ "ರಾಮ ರಾಮ " ಅನ್ನುವ ಅಜ್ಜಿಯರ ತನಕ , ರಾಮ ಸೀತೆಯರು ನಮ್ಮ ಜೀವನದ ಭಾಗವಾಗಿ ಬಿಟ್ಟಿದ್ದಾರೆ . !
ಅಷ್ಟು ದೊಡ್ಡ ಕತೆಯನ್ನು 8 ನಿಮಿಷದಲ್ಲಿ ಸರಳವಾಗಿ ಹೇಳುವ ಪುಟ್ಟ ಪ್ರಯತ್ನ ಈ ಕತೆ .
Saturday Mar 07, 2020
Ep77 - ಪರಶುರಾಮ ಅವತಾರ
Saturday Mar 07, 2020
Saturday Mar 07, 2020
" ದಶಾವತಾರ " ಸರಣಿಯಲ್ಲಿ ಆರನೆಯ ಅವತಾರ ಪರಶುರಾಮನ ಅವತಾರ . ಪರಶುರಾಮ ಅತಿ ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ.
ಪರಶುರಾಮನ ಬಗ್ಗೆ ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ ಸ್ವಲ್ಪ ಹೆಚ್ಚೇ ಹಿಂಸೆ ಅನ್ನಿಸಬಹುದು ಎಂದು , ಪರಶುರಾಮ ಮತ್ತು ಗಣೇಶನನ್ನು ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು ಸೇರಿಸಿದ್ದೇವೆ .
ಕಥೆ ಕೇಳಿ , ನಿಮ್ಮ ಅಭಿಪ್ರಾಯ , ಅನಿಸಿಕೆಗಳನ್ನು kelirondu@gmail.com ಗೆ ಕಳಿಸಿ .