Episodes
Saturday Feb 06, 2021
Ep112 - [ ವ್ಯಕ್ತಿ ಪರಿಚಯ ] ಮೇರಿ ಕೋಮ್
Saturday Feb 06, 2021
Saturday Feb 06, 2021
"ವ್ಯಕ್ತಿ ಪರಿಚಯ " ಸರಣಿಯ ಮೊದಲನೇ ಕಂತು . ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು ಮಕ್ಕಳಿಗೆ ಅವರದೇ ರೀತಿಯಲ್ಲಿ ತಿಳಿ ಹೇಳುವ ಪ್ರಯತ್ನ ಇದು .
ಈ ಸಲದ ವ್ಯಕ್ತಿ ಪ್ರಪಂಚದೆಲ್ಲೆಡೆ "Confident Mary " ಅಂತಲೇ ಕರೆಸಿಕೊಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ .
ಮೇರಿ ಬಾಕ್ಸಿಂಗ್ ನಲ್ಲಿ ಎಷ್ಟು ಪ್ರಸಿದ್ದರೋ ಅವರ ಹಿನ್ನಲೆ ಕೂಡ ಅಷ್ಟೇ ರೋಚಕವಾದದ್ದು .
http://kelirondukatheya.org/stories/ep112 ರಲ್ಲಿ ಮೇರಿ ಅವರ ಕೆಲವು ಚಿತ್ರಗಳನ್ನೂ , ಅವರ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು .
Saturday Jan 23, 2021
Ep111 - ಸೂರ್ಯ, ಚಂದ್ರ, ಮತ್ತು ಸಮುದ್ರಗಳ ಕತೆ
Saturday Jan 23, 2021
Saturday Jan 23, 2021
ಸೂರ್ಯ ಚಂದ್ರರು ಒಂದು ಕಾಲದಲ್ಲಿ ನಮ್ಮ ನಿಮ್ಮ ಥರ ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ? ಹೌದು , ಸೂರ್ಯ ಚಂದ್ರರು ಮನುಷ್ಯರ ಥರ ಮನೆಯಲ್ಲಿ ಇರ್ತಿದ್ರು ಅಂತ ಆಫ್ರಿಕನ್ನರು ನಂಬುತ್ತಾರಂತೆ .
ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ ಇರ್ತಾರೆ ? ತಿಳಿಯೋಕೆ , ಈ ಕತೆ ಕೇಳಿ .
Saturday Jan 09, 2021
Ep110 - ಸಿಡುಕ ಸಿದ್ದ ಹಾಗೂ ಗುಹೆಯ ಮನುಷ್ಯ
Saturday Jan 09, 2021
Saturday Jan 09, 2021
ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ. ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ.
ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.
Saturday Dec 26, 2020
Repeat - ಪಾತ್ರೆ ಮರಿ ಇಟ್ಟ ಕತೆ
Saturday Dec 26, 2020
Saturday Dec 26, 2020
ಕೇಳಿರೊಂದು ಕಥೆಯ ಸರಣಿಯ ಕತೆಗಳಲ್ಲಿ ನಾಸ್ರುದ್ದೀನ್ ಹೊಡ್ಜಾನ ಕತೆಗಳು ಅತಿ ಜನಪ್ರಿಯ. 2019 ರಲ್ಲಿ ಪ್ರಕಟವಾಗಿದ್ದ ಈ ಕತೆಯ ಮರು ಪ್ರಸಾರ .
ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ ?
ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ .
Sunday Dec 13, 2020
Ep109 - ಹಸು ಮತ್ತು ನೊಣ
Sunday Dec 13, 2020
Sunday Dec 13, 2020
ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ ( Pink Eye ) ಬರುವುದು ಸಹಜವಾದರೂ , ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ . !
Saturday Nov 28, 2020
Ep108 - ಬಾವಲಿಗಳು ರಾತ್ರಿಯಷ್ಟೇ ಹೊರಗೇಕೆ ಬರುತ್ತವೆ?
Saturday Nov 28, 2020
Saturday Nov 28, 2020
ಬಾವಲಿ ( Bat ) ವಿಚಿತ್ರ ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ .
ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ ತರಂಗಗಳ ನೆರವಿನಿಂದ ದಾರಿ , ಊಟ ಹುಡುಕುತ್ತವೆ .
ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ .
ಕೇಳೋಣ ಬನ್ನಿ .
Friday Nov 13, 2020
[ ವಿಶೇಷ ] - ದೀಪಾವಳಿ ಹಬ್ಬ
Friday Nov 13, 2020
Friday Nov 13, 2020
ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ .
ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ .
ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ ಮೂರು ಕತೆಗಳನ್ನು ಕೇಳೋಣ .
Saturday Oct 31, 2020
Ep107 - ಗುಡುಗು ಮತ್ತು ಸಿಡಿಲು
Saturday Oct 31, 2020
Saturday Oct 31, 2020
ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ . ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ . ಆದರೆ , ಸಾವಿರಾರು ವರ್ಷಗಳ ಹಿಂದೆಯೇ ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ , ಸಿಡಿಲನ್ನು ಚೂಟಿ ಟಗರಿಗೂ , ಗೂಡುಗನ್ನು ಮಗನನ್ನು ಸರಿ ಹಾದಿಗೆ ತರುವ ಅಮ್ಮನಿಗೂ ಹೋಲಿಸುವ ಮೂಲಕ ಕೇಳುವುದಕ್ಕೆ ವಿಶಿಷ್ಟ ಅನುಭವ ಕೊಡುತ್ತದೆ .
Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs. A unique story.
Saturday Oct 17, 2020
Ep106 - ಸುಳ್ಳು ಹೇಳದಿರುವ ಮನುಷ್ಯ
Saturday Oct 17, 2020
Saturday Oct 17, 2020
ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ ಮನುಷ್ಯ ಒಬ್ಬ ಬದುಕಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?
ಈ ಕತೆಯಲ್ಲಿ ಆ ಮನುಷ್ಯನನ್ನ ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ
Saturday Oct 10, 2020
Ep105 - ಸಿಂಹವನ್ನು ಸೋಲಿಸಿದ ತೋಳ ( ಉತ್ತರ ಕರ್ನಾಟಕ ಶೈಲಿ)
Saturday Oct 10, 2020
Saturday Oct 10, 2020
ಕಳೆದ ವಾರ ಇದೇ ಕತೆಯ ಸರಳ ಗನ್ನಡ ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ .
ನೀವೂ , ನಾವೂ ಕೇಳಿ ಮಜಾ ತಗಳ್ಳೋಣಾಂತ ? ಏನಂತೀರಿ ?