Episodes
Friday Nov 16, 2018
Plip Plop ( ಪ್ಲಿಪ್ ಪ್ಲಾಪ್ )
Friday Nov 16, 2018
Friday Nov 16, 2018
ಈ ಬಾರಿಯ ಕತೆಯನ್ನು ನಾವು ಟಿಬೆಟ್ಟಿನ ಜಾನಪದ ಲೋಕದಿಂದ ಆಯ್ದು ತಂದಿದ್ದೇವೆ . ಕತೆಯ ಮೂಲ ದೇಶವಾದ ಟಿಬೆಟ್ ನ ಹಿನ್ನಲೆ ಸಂಗೀತದಿಂದ ಈ ಕಥೆ ಪುಟಾಣಿಗಳಿಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಸಂಶಯ ಇಲ್ಲ .
ಈ ಕತೆಯನ್ನು ಕೇಳಿ ಹಾಗೂ ನಮ್ಮ ವೆಬ್ಸೈಟ್ http://www.kelirondukatheya.org ನಿಂದ ಚಿತ್ರಪುಟಗಳನ್ನು ಕೂಡ ತೆಗೆದುಕೊಂಡು ಬಣ್ಣ ಹಚ್ಚಿ.
For this week, We bring you a charming Tibetan folktale involving animals. The story is also accompanied by a melodious tibetian music involving bells and flutes.
Don't forget to download a charming coloring page that our Artists have created just for this story.
Enjoy listening to this and please do send any feedback to kelirondu@gmail.com
Saturday Nov 10, 2018
Misako and Oni ( ಮಿಸಾಕೊ ಹಾಗು ಓನಿಗಳು
Saturday Nov 10, 2018
Saturday Nov 10, 2018
" ಕೇಳಿರೊಂದು ಕಥೆಯ " ಕಥಾ ಸರಣಿಯ "ವಿಶ್ವ ಜಾನಪದ ಕತೆ "ಗಳ ಮಾಲಿಕೆಯಲ್ಲಿ ಮೊದಲನೇ ಕಂತಿನ ಕತೆ ಜಪಾನ್ ದೇಶದಿಂದ ಆಯ್ದ "ಮಿಸಾಕೊ ಮತ್ತು ಓನಿ " ಯ ಕಥೆ .
ಈ ಓನಿ ಅಂದರೆ ಏನು ಅಂತ ಯೋಚನೆ ಮಾಡ್ತಿದ್ದೀರಾ ? ನಮ್ಮ ಬಕಾಸುರ , ಕುಂಭಕರ್ಣನ ಹಾಗೆ ಜಪಾನ್ ದೇಶದ ಕಥೆಗಳಲ್ಲಿ ಕಂಡು ಬರುವ ಒಬ್ಬ ತರಲೆ ರಾಕ್ಷಸನ ಪಾತ್ರ . ಈ ಕಥೆ ಮಿಸಾಕೊ ಎಂಬ ಹುಡುಗಿ ತನ್ನನ್ನು ಹಿಡಿದಿಟ್ಟ ಓನಿಗಳಿಂದ ಜಾಣತನದಿಂದ ಬಿಡಿಸಿಕೊಂಡು ಬರುವ ಕಥೆಯನ್ನು ನಮ್ಮ ಕಲಾವಿದರು ಸೊಗಸಾಗಿ ನಿರೂಪಿಸಿದ್ದಾರೆ .
ಈ ಕಂತಿನ ಇನ್ನೊಂದು ವಿಶೇಷತೆ ಹಿನ್ನಲೆ ಸಂಗೀತದ್ದು . ಈ ಕಥೆಯ ಹಿನ್ನಲೆ ಸಂಗೀತ ಕೂಡ ಜಪಾನ್ ದೇಶದ ಒಂದು ಜನಪದ ಗೀತೆ. ಈ ಸಂಗೀತದ ಮೂಲ ಆಯಾ ದೇಶದ ಸಂಗೀತವನ್ನು ಕೂಡ ಪರಿಚಯಿಸುವ ಉದ್ದೇಶ ನಮ್ಮದು .
ಕೊನೆಯದಾಗಿ , ಚಿತ್ರ ಪುಟ ( coloring page ) ಗಳನ್ನು ಇಳಿಸಿಕೊಂಡು ಬಣ್ಣ ಹಚ್ಚೋದನ್ನ ಮರೀಬೇಡಿ ..
Thursday Aug 30, 2018
Welcome to Kelirondu Katheya
Thursday Aug 30, 2018
Thursday Aug 30, 2018
ಈ ಕಂತಿನಲ್ಲಿ " ಕೇಳಿರೊಂದು ಕಥೆಯ " ಕಾರ್ಯಕ್ರಮದ ಚಾಲಕರಲ್ಲೊಬ್ಬರಾದ ಆನಂದ್ ಹೆಮ್ಮಿಗೆ ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಮತ್ತು ಮುಂಬರುವ ಯೋಜನೆಗಳ ಬಗ್ಗೆ ಒಂದಿಷ್ಟು ಹಂಚಿಕೊಂಡಿದ್ದಾರೆ .
In this Welcome episode, Anand Hemmige shares the motivation behind this podcast and some future goals.