Episodes
Tuesday Jan 29, 2019
ವಿಶೇಷ ಕಾರ್ಯಕ್ರಮ - ಮಕ್ಕಳಿಂದ ಮಕ್ಕಳಿಗಾಗಿ
Tuesday Jan 29, 2019
Tuesday Jan 29, 2019
"ಅನ್ಯ ದೇಶದ ಜನಪದ ಕಥೆಗಳು " ಸರಣಿಯ ಕೊನೆಯ ಕಂತಿನಲ್ಲಿ , ಕೆಲವು ಪುಟಾಣಿ ಕೇಳುಗರು ತಮಗಿಷ್ಟವಾದ ಕತೆಗಳನ್ನು ತಮ್ಮ ಧ್ವನಿಯಲ್ಲೇ ರಿಕಾರ್ಡ್ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ . ಕಥಾವರ್ಣನೆಯ ಸಹಜತೆಯನ್ನ ಹಾಗೆ ಉಳಿಸಿಕೊಳ್ಳುವುದಕ್ಕಾಗಿ ಯಾವುದೇ ಎಡಿಟಿಂಗ್ ಮಾಡದೆ ಹಾಗೆ ಪ್ರಸ್ತುತಪಡಿಸುತ್ತಿದ್ದೇವೆ .
ನೀವೂ ಕೇಳಿ, ನಿಮ್ಮ ಮಕ್ಕಳಿಗೂ ಕೇಳಿಸಿ , ಇದರಿಂದ ಸ್ಫೂರ್ತಿ ಪಡೆದು ಅವರೂ ಕತೆ ಹೇಳಿದರೆ , ರಿಕಾರ್ಡ್ ಮಾಡಿ ನಮಗೆ ಕಳಿಸಿ . ಅದಕ್ಕಿಂತ ಉತ್ತಮ ಫೀಡ್ಬ್ಯಾಕ್ ಮತ್ತೊಂದಿಲ್ಲ . !!
ಕತೆ ಹೇಳಿರುವ ಪುಟಾಣಿಗಳು :
೧. ರೋಹನ್ - 7 ವರ್ಷ
೨. ತೇಜಸ್ - 3 ವರ್ಷ
೩. ವಿಸ್ಮಯ್ - 4 ವರ್ಷ
೪. ದ್ರವೀಣಾ - 11 ವರ್ಷ
Monday Jan 21, 2019
ಸಮುದ್ರದ ನೀರು ಉಪ್ಪೇಕೆ ? ( A folk tale from Norway )
Monday Jan 21, 2019
Monday Jan 21, 2019
ಅಣ್ಣ ತಮ್ಮಂದಿರು , ಮಾಯಾ ಪಾತ್ರೆ , ಸಮುದ್ರ ಇವೆಲ್ಲವನ್ನೂ ಒಳಗೊಂದು ನಿರೂಪಿಸಿದಂತ ಈ ಜನಪದ ಕತೆ , ಅತಿಯಾಸೆಯ ಅಡ್ಡ ಪರಿಣಾಮಗಳನ್ನು ತಿಳಿಸುವ ಈ ಕತೆ ಪ್ರಪಂಚದ ಬಹಳ ದೇಶಗಳಲ್ಲಿ ಮಕ್ಕಳ ಅಚ್ಚು ಮೆಚ್ಚು ಅನ್ನಿಸಿಕೊಂಡಿದೆ . ಯೂರೋಪಿನ ಬಹಳಷ್ಟು ದೇಶಗಳಲ್ಲಿ ಜನಪ್ರಿಯ ಆಗಿರೋ ಈ ಕತೆಯ ಆವೃತ್ತಿಯನ್ನು ನಾರ್ವೆ ದೇಶದಿಂದ ಆಯ್ದುಕೊಂಡಿದ್ದೇವೆ .
Friday Jan 11, 2019
ಮೀನುಗಾರ ಹಾಗು ಆಮೆಯ ಕತೆ ( ಮೆಕ್ಸಿಕೋ )
Friday Jan 11, 2019
Friday Jan 11, 2019
ದಕ್ಷಿಣ ಅಮೆರಿಕಾದ ( ಅಜ್ಟೆಕ್ ) ಸಂಸ್ಕೃತಿ ಅತ್ಯಂತ ಹಳೆಯ ಸಂಸ್ಕೃತಿಗಳಲ್ಲೊಂದು .
ಸೂರ್ಯ, ಚಂದ್ರ , ಸಮುದ್ರ ಹೀಗೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನೇ ದೇವೆರೆಂದು ನಂಬಿದ ಈ ಜನರಲ್ಲಿ ಕತೆಗಳಿಗೇನೂ ಕೊರತೆಯಿಲ್ಲ. ಮನುಷ್ಯರ ದುರಾಸೆಯ ಪರಿಣಾಮವನ್ನು ಬಹಳ ಚೆನ್ನಾಗಿ ವರ್ಣಿಸುವ ಈ ಕತೆ ಇಂದಿನ ಪೀಳಿಗೆಗೆ ಒಳ್ಳೆಯ ಮಾದರಿ .
Fisherman and Turtle is a popular Aztec folktale. Using Nature as a story telling aid is very commonly found in Aztec tales. Enjoy this wonderful tale about greed and its ill effects.
Source: Book-The Fisherman and the Turtle by;Eric A Kimmel
Background music source : https://www.youtube.com/watch?v=WoqbN-G_i4U
Saturday Jan 05, 2019
ಈರುಳ್ಳಿ ಮತ್ತು ಬೆಳ್ಳುಳ್ಳಿ ( Onion and Garlic )
Saturday Jan 05, 2019
Saturday Jan 05, 2019
ಈರುಳ್ಳಿ , ಬೆಳ್ಳುಳ್ಳಿಗಳು ಮನೆಗಳಲ್ಲಿ ಎಷ್ಟು ಸಾಮಾನ್ಯ ಅಲ್ವೇ ? ಒಂದು ಕಾಲದಲ್ಲಿ ಇವು ಬೆಳ್ಳಿ , ಬಂಗಾರಕ್ಕಿಂತಲೂ ಅಮೂಲ್ಯವಾಗಿದ್ದವು ಅಂದ್ರೆ ಆಶರ್ಯ ಆಗುತ್ತೆ ಅಲ್ವೇ ? ಈ ಸಲದ ಕತೆಯಲ್ಲಿ ಅಂಥ ಒಂದು ಊರಿಗೆ ಹೋಗೋಣ ?
A man learns that there is a strange land where Onions are more valuable than Gold and Diamond. When he sets out to sell his Onions to that land, a hilarious chain events ensue. The story ends with the man and his brother learning a valuable life lesson about needs and wants.
Saturday Dec 29, 2018
ಕಳೆದು ಹೋದ ಸೂರ್ಯ ( The Sun that got lost )
Saturday Dec 29, 2018
Saturday Dec 29, 2018
ಈ ಸಲದ ಕತೆ ದಕ್ಷಿಣ ಅಮೆರಿಕಾದ ಬುಡಕಟ್ಟು ಜನಾಂಗದಲ್ಲಿ ಒಂದಾದ " ವಾರವು " ಜನರಿಂದ ಹೇಳಲ್ಪಟ್ಟ ಕತೆ . ಈ ಜನರು ನಮ್ಮ ಹಾಗೆ ಸೂರ್ಯನನ್ನ ದೇವರು ಅಂತ ಭಾವಿಸ್ತಿದ್ರಂತೆ .
ವಿಜ್ಞಾನ ಸೂರ್ಯನ ಚಲನೆಯನ್ನ ವಿವರಿಸೋ ಮುಂಚೆ , ಈ ಜನ ಸೂರ್ಯನ ಬೆಳಕು - ಕತ್ತಲು , ಸೂರ್ಯೋದಯ - ಸೂರ್ಯಾಸ್ತಗಳನ್ನು ಬಹಳ ಚಂದವಾಗಿ ಕತೆಗಳ ಮೂಲಕ ವಿವರಿಸುತ್ತಿದ್ದರು . ಅಂತದೇ ಒಂದು ಉದಾಹರಣೆ ಈ ಕತೆ .
ಈ ಕತೆಯಲ್ಲಿ ಸೂರ್ಯನನ್ನ ಮನುಷ್ಯನೊಬ್ಬ ಕದ್ದುಕೊಂಡು ಹೋದಾಗ , ಪುಟ್ಟ ಹುಡುಗಿಯೊಬ್ಬಳು ಹೇಗೆ ಬಿಡಿಸಿಕೊಂಡು ಬಂದು ಮತ್ತೆ ಪ್ರಪಂಚಕ್ಕೆ ಬೆಳಕು ಕೊಡುತ್ತಾಳೆ ಅನ್ನೋದನ್ನು ಕೇಳೋಣ .
Friday Dec 21, 2018
ಚಾಕಲೇಟ್ ಹಾಗೂ ಹುಡುಗನ ಕತೆ ( The Boy who loved Chocolate )
Friday Dec 21, 2018
Friday Dec 21, 2018
ಈ ಸಲದ ಕತೆ ವೆನೀಜುವೆಲಾ ದೇಶದಿಂದ ಆರಿಸಿದ ಚಾಕಲೇಟ್ ಬಗೆಗಿನ ಕತೆ. ಚಾಕಲೇಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಅಲ್ವೇ ? ಆದ್ರೆ , ಚಾಕಲೇಟ್ ಅಂದ್ರೆ ಏನೂ ಅಂತಾನೆ ಗೊತ್ತಿಲ್ದೆ ಇದ್ದ ಒಂದು ಊರಿತ್ತು ಅಂದ್ರೆ ಆಶ್ಚರ್ಯ ಆಗುತ್ತೆ ಅಲ್ವಾ ? ಇಂಥಾ ಒಂದು ಊರಿನಲ್ಲಿ ಚಾಕಲೇಟ್ ಬಗ್ಗೆ ಅತೀ ಆಸಕ್ತಿ ಹೊಂದಿದ್ದ ಹುಡುಗನೊಬ್ಬನ ಕತೆ. ಆ ಹುಡುಗನಿಗೆ ಚಾಕಲೇಟ್ ಬಗ್ಗೆ ಆಸಕ್ತಿ ಹೀಗೆ ಬಂತು , ಅವನು ಚಾಕಲೇಟ್ ಬಗ್ಗೆ ಮಾಹಿತಿ ಪಡೆಯೋದಕ್ಕೆ ಏನೇನು ಮಾಡಿದ , ಕೊನೆಗೆ ತನ್ನ ಊರಿನವರ ಅಭಿಪ್ರಾಯವನ್ನ ಹೇಗೆ ಬದಲಿಸಿದ ಅನ್ನೋದರ ಬಗ್ಗೆ ಈ ವಾರದ ಕತೆಯಲ್ಲಿ ಹೇಳಲಾಗಿದೆ .
A charming Venezuelan story about a village that banned Chocolate and a boy that loved it so much that he went on an adventure all by himself to learn about it. This story teaches us about curiosity, perseverance and patience, all of which are important life skills.
Enjoy this with a cup of Hot Chocolate. !
Saturday Dec 15, 2018
ಸಿಂಹದ ಮೀಸೆ ( ಇಥಿಯೋಪಿಯಾದ ಕತೆ )
Saturday Dec 15, 2018
Saturday Dec 15, 2018
ಸಿಂಹ ಅಂದ್ರೆ ಯಾರಿಗ್ ಭಯ ಆಗಲ್ವ ? ಅಂತ ಭಯಾನಕ ಪ್ರಾಣಿಯಿಂದ ಕೂದಲು ಕಿತ್ಕೊಂಡು ಬರೋದು ಅಂದ್ರೆ ಏನು ? ಐಶಾ ಮತ್ತು ದಾನಿ ಅನ್ನೋ ಅಕ್ಕ ತಮ್ಮ ಹೇಗೆ ಸಿಂಹದ ಕೂದಲನ್ನ ತೆಗೆದುಕೊಳ್ಳೋ ಮುಖಾತರ ನಿತ್ಯ ಜಗಳವನ್ನು ನಿಲ್ಲಿಸಿದರು ಅಂತ ಕೇಳೋಣ .
Friday Dec 07, 2018
ಕತ್ತೆ ಕಿವಿಯ ರಾಜಕುಮಾರ ( Prince with Donkey Ears)
Friday Dec 07, 2018
Friday Dec 07, 2018
ಈ ಸಲದ ಕಥೆಗೆ ನಾವು ನಿಮ್ಮನ್ನು ಯೂರೋಪಿಗೆ ಕರೆದೊಯ್ಯಲಿದ್ದೇವೆ. ತುಂಬಾ ಜನಪ್ರಿಯವಾಗಿರೋ "ರಾಜಕುಮಾರನ ಕತ್ತೆ ಕಿವಿಗಳು " ಅನ್ನೋ ಜನಪದ ಕತೆಯನ್ನು ಈ ಸಲ ನಮ್ಮ ತಂಡದವರು ಪ್ರಸ್ತುತ ಪಡಿಸಲಿದ್ದಾರೆ.
ಬೇರೆಯವರ ಮೇಲೆ ತೋರಿಸೋ ದರ್ಪ ಮತ್ತು ಅಹಂಕಾರ ಹೇಗೆ ನಮ್ಮ ಮೇಲೆ ತಿರುಗಿಬೀಳ ಬಹುದು ಅನ್ನೋದಕ್ಕೆ ಈ ಕತ್ತೆ ಅತ್ಯುತ್ತಮ ಉದಾಹರಣೆ .
ಈ ಕತೆಯ ಮೂಲ ಇಲ್ಲಿನಿಂದ ಆಯ್ದುಕೊಂಡಿದ್ದೇವೆ : https://www.goodreads.com/book/show/5660410-the-king-with-horse-s-ears-and-other-irish-folktales
This week's story is a very popular European folk tale about an arrogant prince with Donkey ears. This story is an excellent example of the proverb "Those who live in Glass houses shouldn't throw stones at others".
Saturday Dec 01, 2018
ಸೋಮಾರಿ ಜ್ಯಾಕ್ ( ಇಂಗ್ಲೆಂಡಿನ ಕತೆ )
Saturday Dec 01, 2018
Saturday Dec 01, 2018
ಇಂಗ್ಲೆಂಡಿನ ಹಳ್ಳಿ ಒಂದರಲ್ಲಿ ವಾಸ ಮಾಡ್ತಿದ್ದ ಮುಗ್ದ ಹುಡುಗ ಜ್ಯಾಕ್ , ಹಳ್ಳಿ ಜನರಿಂದ ಯಾವಾಗ್ಲೂ "ಪೆದ್ದ , ಪೆದ್ದ " ಅನ್ನಿಸಿಕೊಳ್ತಿದ್ದ. ಆದರೆ , ಅದೇ ಮುಗ್ದತನ ಅವನ ಜೀವನ ಅಷ್ಟೇ ಅಲ್ಲ, ಬೇರೆಯವರ ಜೀವನವನ್ನೂ ಹೇಗೆ ಬದಲಿಸಿತು ಅನ್ನೋದನ್ನು ಈ ಹಾಸ್ಯ ಭರಿತ ಕತೆ ಹೇಳುತ್ತದೆ .
Lazy Jack , an English tale, is a humor story about a good for nothing boy called Jack, who with a series of hilarious incidents ends up meeting his future wife and adds fun to her life too.
Story is inspired from this link: http://www.sacred-texts.com/neu/eng/eft/eft28.htm
Friday Nov 23, 2018
ಚಿಗುರು ಮತ್ತು ಬೇರು
Friday Nov 23, 2018
Friday Nov 23, 2018
ಜಾಗತಿಕ ಜನಪದ ಕತೆಗಳ ಮಾಲಿಕೆಯ 3ನೇ ಕತೆ , ಉತ್ತರ ಅಮೇರಿಕ ಖಂಡದ "ಇಂಡಿಯನ್ " ಸಂಸ್ಕೃತಿಯಲ್ಲಿ ಹೇಳಲ್ಪಡುವ ಒಂದು ಜನಪ್ರಿಯ ನೀತಿ ಕತೆ .
"Tops and Bottoms" ಎಂದು ಜನಪ್ರಿಯವಾಗಿರೋ ಈ ಕಥೆಯ ಪಾತ್ರಧಾರಿಗಳು ಸೋಮಾರಿ ಕರಡಿ ಹಾಗೂ ಚತುರ ಮೊಲ.
ಪರಿಶ್ರಮ ಮತ್ತು ಹಂಚಿಕೆಯ ಮಹತ್ವವನ್ನು ಈ ಕತೆ ತಿಳಿಸಿಕೊಡುತ್ತದೆ .