Episodes
Saturday Apr 13, 2019
ಕಿಕ್ಕಿರಿದ ಮನೆಯ ಮನುಷ್ಯ
Saturday Apr 13, 2019
Saturday Apr 13, 2019
ಗೆಳೆಯರೇ , "ಇದು ಸಾಕಾಗೋಲ್ಲ , ಇನ್ನೂ ಬೇಕು " ಅನ್ನೋ ಭಾವೆನೆಗೆ ಯಾರೂ ಹೊರತಲ್ಲ , ಇನ್ನು ಮಕ್ಕಳಂತೂ ಕೇಳೋದೇ ಬೇಡ . ಅದು ಬೇಕು , ಇದು ಬೇಕು ಅನ್ನೋದು ಮುಗಿಯೋದೇ ಇಲ್ವೇನೋ ಅನ್ನಿಸುತ್ತದೆ ಹಲವು ಸಾರಿ ಅಲ್ವೇ ?
ಈ ಸಲ "ನಮ್ಮ ಮನೆ ತುಂಬಾ ಪುಟ್ಟದು " ಅಂತ ದೂರು ಹೊತ್ತುಕೊಂಡು ನಾಸ್ರುದ್ದೀನ್ ಬಳಿಗೆ ಬಂದ ಮನುಷ್ಯ ಒಬ್ಬನನಿಗೆ ಹೂಡ್ಜ ಇರೋದರಲ್ಲೇ ತೃಪ್ತಿ ಪಡೆಯುವುದು ಹೇಗೆ ಅನ್ನೋದನ್ನು ಪುಟ್ಟ ಪುಟ್ಟ ಪರೀಕ್ಷೆಗಳನ್ನು ಒಡ್ಡಿ ತೋರಿಸಿಕೊಡುವುದನ್ನು ಕೇಳೋಣ .
Most of us have been guilty of complaining culture. So how do we teach our kids to find happiness in what we already have ?
This week, lets listen to a funny story about a man who comes to Hodja complaining about his home being too crowded for his family.
Hodja makes the man undergo a series of small tests and finally makes him realize his house was already big enough, just that his thoughts were not big enough.
Friday Apr 05, 2019
ಯುಗಾದಿ ವಿಶೇಷ
Friday Apr 05, 2019
Friday Apr 05, 2019
ಕನ್ನಡಿಗರ ಹೊಸ ವರ್ಶವಾದ ಯುಗಾದಿ ಹಬ್ಬ ಇವತ್ತು . ಕೇಳಿರೊಂದು ಕಥೆಯ ತಂಡ ಹಬ್ಬದ ತಯಾರಿಯ ಜತೆಗೆ ಈ ಹಬ್ಬದ ವಿಶೇಷತೆ ಬಗ್ಗೆ ಒಂದು ಪುಟ್ಟ ಕಾರ್ಯಕ್ರಮ . ಜತೆಗೆ ಪುಟಾಣಿ ಕೇಳುಗರ ದನಿಯಲ್ಲಿ ಯುಗಾದಿಯ ಶುಭಾಶಯಗಳು ಕೂಡ . ನೀವೂ ಕೇಳಿ , ನಿಮ್ಮ ಪುಟಾಣಿಗಳಿಗೂ ಕೇಳಿಸಿ .
Friday Mar 29, 2019
ನಾಸ್ರುದ್ದೀನ್ ಹೂಡ್ಜ - ಪ್ರಾಮಾಣಿಕ ಕಳ್ಳ
Friday Mar 29, 2019
Friday Mar 29, 2019
" ಪ್ರಾಮಾಣಿಕ , ಹಾಗೂ ಕಳ್ಳತನ ಎರಡೂ ಒಂದಕ್ಕೊಂದು ವಿರುದ್ಧ ಅಲ್ವೇ ? " , ಅನ್ನೋ ಪ್ರಶ್ನೆ ಬರೋದು ಸಹಜ . ಹಾಗಾದ್ರೆ ಈ "ಪ್ರಾಮಾಣಿಕ ಕಳ್ಳ " ಅಂದ್ರೆ ಯಾರು . ? ಕಲ್ಲರಲ್ಲೂ ಪ್ರಾಮಾಣಿಕರು ಇರ್ತಾರೋ ?
ಈ ಕತೆಯಲ್ಲಿ ವ್ಯಾಪಾರಿ ಹೂಡ್ಜ ತಾನು ಮಾರಾಟ ಮಾಡುತ್ತಿದ್ದ ವಸ್ತು ತೆರಿಗೆ ಅಧಿಕಾರಿಯ ಕಣ್ಣಿಗೆ ಕಾಣುವಂತೆ ಇದ್ರೂ ಹೇಗೆ ತೆರಿಗೆ ತಪ್ಪಿಸಿ ಹಲವಾರು ವರ್ಷ ಓಡಾಡುತ್ತಾನೆ . ಕೊನೆಗೆ , ತೆರಿಗೆ ಅಧಿಕಾರಿಗೆ ಕುತೂಹಲ ತಡೆಯೋಕ್ಕಾಗದೆ ಸತಃ ಹೂಡಜನನ್ನೇ ಕೇಳಿದಾಗ ಹೊಡ್ಜ ಏನು ಹೇಳ್ತಾನೆ ಗೊತ್ತಾ ?
ಮುಂದಿನದನ್ನು ಕತೆಯಲ್ಲಿ ಕೇಳಿ. !
Friday Mar 22, 2019
ನಾಸ್ರುದ್ದೀನ್ ಹೊಡ್ಜ ಹಾಗೂ ಖುಷಿ ಕಳೆದುಕೊಂಡ ಮನುಷ್ಯ
Friday Mar 22, 2019
Friday Mar 22, 2019
" ನಾಸ್ರುದ್ದೀನ್ ಹೂಡ್ಜ " ಕತೆಗಳ ಮಾಲಿಕೆಯ ಎರಡನೆಯ ಕತೆ ಇದು .
ಶ್ರೀಮಂತ ಮನುಷ್ಯ ಒಬ್ಬ ಹಣದ ಗಂಟು ಇಟ್ಕೊಂಡು ಹೊರಟಿರಬೇಕಾದ್ರೆ ಆ ಹಣದ ಗಂಟನ್ನು ಹೊಡ್ಜ ಹೊತ್ಕೊಂಡು ಓಡಿ ಬಿಡ್ತಾನೆ . ಯಾಕೆ ತಗೊಂಡು ಹೋದ ? ಅದಾದ ಮೇಲೆ ಏನಾಗುತ್ತೆ ಅನ್ನೋದನ್ನ ಕತೆಯಲ್ಲೇ ಕೇಳಿ . !
Monday Mar 18, 2019
ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ
Monday Mar 18, 2019
Monday Mar 18, 2019
ನಾಸರುದ್ದೀನ್ ಹೂಡ್ಜ , ಅಥವಾ ಮುಲ್ಲಾ ನಾಸ್ರುದ್ದೀನ್ ಎಂದು ಪ್ರಸಿದ್ಧನಾಗಿದ್ದ ಹೊಡ್ಜ , ಟರ್ಕಿ ದೇಶದವನಾಗಿದ್ರೂ , ಅವನ ಹಾಸ್ಯ , ತರ್ಲೆ ಮಿಶ್ರಿತ ಕತೆಗಳು ಪ್ರಪಂಚದ ಎಲ್ಲೆಡೆ ಅಚ್ಚು ಮೆಚ್ಚು . ಹಾಗೆ , ನಮಗೂ ಕೂಡ . !
ಈ ಸಲದ ಕತೆಯಲ್ಲಿ ಕತ್ತೆಯ ಜತೆ ಹೊರಟಿದ್ದ ನಾಸ್ರುದ್ದೀನ್ ಗೆ ಆ ಕತ್ತೆಯೇ ದೊಡ್ಡ ತಲೆ ನೋವಾಗಿ , ಕೊನೆಗೆ ಅವನ ತಲೆ ಮೇಲೆ ಹೊತ್ತು ಕೊಳ್ಳಬೇಕಾದ ಪರಿಸ್ಥಿತಿ ಬಂತು ! .
Saturday Mar 09, 2019
ಕಳ್ಳರನ್ನು ಹಿಡಿದ ತೆನಾಲಿ ರಾಮ
Saturday Mar 09, 2019
Saturday Mar 09, 2019
ನಾವು ಮಕ್ಕಳಿದ್ದಾಗ ಶಾಲೆ ಪಠ್ಯ ಪುಸ್ತಕದಲ್ಲಿ ಖಾಯಂ ಇರುತ್ತಿದ್ದ ತೆನಾಲಿ ರಾಮನ ಕತೆ . ಈಗಿನ ಮಕ್ಕಳು ಶಾಲೆಯಲ್ಲಿ ಓದ್ತಾರೋ ಇಲ್ವೋ ಗೊತ್ತಿಲ್ಲ , ಆದರೆ , ನಮಗಂತೂ ಈ ಕತೆ ಮಾಡುವಾಗ ಹಳೆ ನೆನಪುಗಳು ಮರು ಕಳುಸಿದ್ವು . ನೀವೂ ಕೇಳಿ , ಮಕ್ಕಳಿಗೂ ಕೇಳಿಸಿ .
ಚಿತ್ರ ಪುಟ :
Saturday Mar 02, 2019
ಶಿವರಾತ್ರಿ ಹೇಗೆ ಆಚರಣೆಗೆ ಬಂತು ?
Saturday Mar 02, 2019
Saturday Mar 02, 2019
ಕೇಳುಗರಿಗೆ ಮಹಾ ಶಿವರಾತ್ರಿಯ ಶುಭಾಶಯಗಳು . ಶಿವರಾತ್ರಿ ಅಂದ್ರೆ ರಾತ್ರಿ ಇಡೀ ಜಾಗರಣೆಗೆ ಹೆಸರುವಾಸಿ ಅಲ್ವೇ ? ಜಾಗರಣೆ ಯಾಕೆ ಮಾಡ್ತಾರೆ ಅನ್ನೋದರ ಬಗ್ಗೆ ಹಲವು - ವೈಜ್ಞಾನಿಕ , ಪೌರಾಣಿಕ - ಕಥೆಗಳಿವೆ. ಆ ಕತೆಗಳಲ್ಲಿ ಒಂದನ್ನು ಇಲ್ಲಿ ಆಯ್ದು ಕೊಂಡಿದ್ದೇವೆ .
ಕಥೆ ಹೇಗನ್ನಿಸ್ತು ಅಂತ ನಮಗೆ ಖಂಡಿತ ತಿಳಿಸಿ ಆಯ್ತಾ ?
Background Music credit : B. Sivaramakrishna Rao & Veeramani Kannan - Lingashtakam (Track 02) Shiva Meditation
Friday Feb 22, 2019
Friday Feb 22, 2019
ತೆನಾಲಿ ರಾಮನ ಕತೆಗಳ ಮುಂದಿನ ಕಂತು ಇದೋ ಇಲ್ಲಿದೆ . ಸಾಮಾನ್ಯ ಜನರ ಕಷ್ಟ , ದುಃಖಗಳಿಗೆ ಪರಿಹಾರ ಕೊಡುತ್ತಿದ್ದ ತೆನಾಲಿ ರಾಮ ಈ ಬಾರಿ ತನ್ನ ರಾಜ ಮತ್ತು ರಾಜ್ಯಕ್ಕೇ ಸವಾಲೊಡ್ಡಿದ್ದ ವ್ಯಾಪಾರಿಯ ವಿಚಿತ್ರ ಪ್ರಶ್ನೆಗೆ ಉತ್ತರ ಏನೆಂಬುದನ್ನು ಕೇಳೋಣ ?
Saturday Feb 16, 2019
ತೆನಾಲಿ ರಾಮ ಮತ್ತು ಕೆಂಪು ನವಿಲುಗಳು
Saturday Feb 16, 2019
Saturday Feb 16, 2019
ತೆನಾಲಿ ರಾಮನ ಕಥಾಮಾಲಿಕೆಯ ಮುಂದಿನ ಕತೆ ಕೆಂಪು ನವಿಲುಗಳ ಬಗ್ಗೆ . " ಏನು ? ಕೆಂಪು ನವಿಲುಗಳೇ ? " ಅಂತ ಅಂದ್ಕೊಳ್ತಿದ್ದೀರಾ ? ಈ ರೋಚಕ ಕತೆ ಕೇಳಿಸಿಕೊಳ್ಳಿ . ನಿಮ್ಮ ಅನಿಸಿಕೆ , ಪತ್ರ , ಚಿತ್ರಗಳನ್ನು kelirondu@gmail.com ಗೆ ಕಳಿಸಿ.
Saturday Feb 09, 2019
ತೆನಾಲಿ ರಾಮ ಹಾಗು ಭತ್ತದ ಜಾಡಿಯ ಕತೆ
Saturday Feb 09, 2019
Saturday Feb 09, 2019
ತೆನಾಲಿ ರಾಮನ ಕತೆಗಳು ಯಾರಿಗೆ ಇಷ್ಟ ಇಲ್ಲ ಅಲ್ವೇ . ? ಈಗಿನ ಮಕ್ಕಳಿಗೆ ತೆನಾಲಿ ರಾಮನ ಕತೆಗಳನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಈ ಸಂಪುಟದಲ್ಲಿ ಮಾಡುತ್ತಿದ್ದೇವೆ .
ಭತ್ತದ ಜಾಡಿಯ ಕತೆಯಲ್ಲಿ ತೆನಾಲಿ ರಾಮ ಇಬ್ಬರು ಗೆಳೆಯರ ನಡುವಿನ ಜಗಳವನ್ನು ಹೇಗೆ ಬಿಡಿಸುತ್ತಾನೆ ಅನ್ನೋದನ್ನ ಕೇಳೋಣ .
ಈ ಕೆಳಗಿನ ಚಿತ್ರ ಪುಟ ಕತೆಯ ಸಾರಾಂಶವನ್ನು ಚೆನ್ನಾಗಿ ಹಿಡಿದಿಡುತ್ತದೆ . ಬಿಡಿಸಿಕೊಟ್ಟ ಗೆಳೆಯ ಶಿವಾನಂದ ಉಳಿಯವರಿಗೆ ಧನ್ಯವಾದಗಳು .