Episodes
Saturday Jun 29, 2019
Roadtrip combo specials - ತಾಳ್ಮೆಯ ಬಗ್ಗೆ ಎರಡು ಕತೆಗಳು
Saturday Jun 29, 2019
Saturday Jun 29, 2019
"ತಾಳಿದವನು ಬಾಳಿಯಾನು " ಅನ್ನೋ ಗಾದೆ ಕೇಳಿರಬೇಕಲ್ಲ . ಅವಸರ ಮಾಡಿದ್ರೆ ಕೆಲಸ ಹಾಳಾಗುತ್ತೆ ಅನ್ನೋದನ್ನ ಹೇಳೋ ಎರಡು ಕತೆಗಳ ಬೋನಸ್ ಕಂತು ನಮ್ಮ ಕತೆಗಳ ಸಂಗ್ರಹದಿಂದ .
ಮೊದಲನೇ ಕತೆ "ಬಾಯಿಬಡುಕ ಆಮೆ ಮತ್ತು ಬಾತುಕೋಳಿಯ ಕತೆ " ಯಲ್ಲಿ , ನೀರಿಲ್ಲದೆ ಬಳಲಿದ್ದ ಆಮೆ, ಕಷ್ಟದ ಸಮಯದಲ್ಲೂ ತನ್ನ ಬಾಯಿ ಬಡುಕ ತನವನ್ನ ತೋರಿಸಿದ ಪರಿಣಾಮ ಏನಾಯ್ತು ಅನ್ನೋದನ್ನು ಕೇಳೋಣ .
ಎರಡನೇ ಕತೆ " ಚಿನ್ನದ ಮೊಟ್ಟೆಯಿಡುವ ಬಾತುಕೋಳಿ " ಯಲ್ಲಿ , ದಿನಕ್ಕೊಂದು ಚಿನ್ನದ ಮೊಟ್ಟೆ ಇಡುತ್ತಿದ್ದ ಬಾತುಕೋಳಿಯನ್ನು ಇನ್ನೂ ಜಾಸ್ತಿ ಮೊಟ್ಟೆ ಪಡೆಯೋ ದುರಾಸೆಯಿಂದ ಬಾತುಕೋಳಿಯನ್ನೇ ಕಳೆದುಕೊಂಡ ರೈತನೊಬ್ಬನ ಕತೆ ಕೇಳೋಣ .
ಎಂದಿನ ಹಾಗೆ , ನಿಮ್ಮ ಅಭಿಪ್ರಾಯಗಳನ್ನ kelirondu@gmail.com ಗೆ ಕಳಿಸಿ.
Friday Jun 21, 2019
Road trip specials - Stories about Fox
Friday Jun 21, 2019
Friday Jun 21, 2019
ನಮ್ಮ ಸರಣಿ -೧ ರಲ್ಲಿ ಪ್ರಕಟವಾಗಿದ್ದ ಎರಡು ಜನಪ್ರಿಯ ಕಥೆಗಳ Combo.
೧. ನರಿ ಹಾಗೂ ಮೇಕೆ ಮರಿಯ ಕಥೆ
೨. ನರಿ ಹಾಗೂ ಡೊಳ್ಳಿನ ಕಥೆ .
Friday Jun 14, 2019
Speech difficulties in Children - Interview with Dr.Archana Guruprasad
Friday Jun 14, 2019
Friday Jun 14, 2019
ಮಕ್ಕಳಲ್ಲಿ ಮಾತಾನಾಡುವಿಕೆಯ ತೊಂದರೆಗಳು ಅನ್ನೋ ವಿಷಯದ ಬಗ್ಗೆ ಲಾಸ್ ಏಂಜೆಲ್ಸ್ ನಲ್ಲಿ ವಾಕ್ ತಜ್ಞೆಯಾಗಿರುವ ಡಾ. ಅರ್ಚನಾ ಗುರುಪ್ರಸಾದ್ ಅವರೊಡನೆ ನಡೆದ ಸಮಾಲೋಚನೆಯ ಮುದ್ರಿಕೆ .
ಈ ಸಮಾಲೋಚನೆಯಲ್ಲಿ , ಮಕ್ಕಳಲ್ಲಿ ಮಾತು ಹಾಗು ಕೇಳುವಿಕೆಯ ಸಮಸ್ಯೆಗಳು , ಅದರಿಂದ ಕಲಿಕೆಯ ಮೇಲೀನ ಪ್ರಭಾವ , ಮಕ್ಕಳು ಮಾತನಾಡುವುದನ್ನು ಪ್ರೇರೇಪಿಸಲು ತಂದೆತಾಯಂದಿರು ಮಾಡಬಹುದಾದ ಸುಲಭ ವಿಧಾನಗಳು ಇತರೆ ವಿಷಯಗಳ ಬಗ್ಗೆ ಮಾತನಾಡಿದೆವು .
ಈ ಸಂದರ್ಶನದ ಬಗ್ಗೆ ಪ್ರಶ್ನೆಗಳಿದ್ದಲ್ಲಿ kelirondu@gmail.com ಒಂದು ಮಿಂಚೆ ಕಳಿಸಿ .
We talked to Dr.Archana Guruprasad, who practices Speech pathology in Los Angeles Area schools , about speech difficulties in children, how to encourage early speech and other learning techniques in this episode.
Please leave us a review on how you felt about this episode on our facebook page https://fb.me/keiirondukatheya or email us at kelirondu@gmail.com
Sunday Jun 02, 2019
ವಿಶೇಷ ಕಂತು - ಈದ್ ಮಿಲಾದ್ ಹಬ್ಬ
Sunday Jun 02, 2019
Sunday Jun 02, 2019
ಜೂನ್ ಮೊದಲ ವಾರ ಪ್ರಪಂಚದೆಲ್ಲೆಡೆ ಮುಸ್ಲಿಂ ಭಾಂದವರು ಈದ್ ಮಿಲಾದ್ ಹಬ್ಬ ಆಚರಣೆ ಮಾಡ್ತಾರೆ .
ದೈಹಿಕ ಐಚ್ಚೆಗಳನ್ನು ನಿಯಂತ್ರಿಸಿ ಪ್ರಾರ್ಥನೆ , ದಾನ ಮುಂತಾದ ಕಾರ್ಯಗಳ ಮೂಲಕ ಮನಸ್ಸನ್ನು ಶುದ್ಧವಿರಿಸಿಕೊಳ್ಳುವ ಹಿನ್ನಲೆಯಿರುವ ಈ ಹಬ್ಬವನ್ನು ಪುಟಾಣಿ ಕೇಳುಗರಿಗೆ ಅರ್ಥವಾಗುವಂತೆ ತಲುಪಿಸುವ ಪುಟ್ಟ ಪ್ರಯತ್ನ ಇದು .
ಎಲ್ಲ ಮುಸ್ಲಿಂ ಭಾಂದವರಿಗೂ ಈದ್ ಹಬ್ಬದ ಶುಭಾಶಯಗಳು .
Friday May 24, 2019
ಪಾತ್ರೆ ಮರಿ ಇಟ್ಟ ಕತೆ
Friday May 24, 2019
Friday May 24, 2019
ಹಾಸ್ಯ ಮಿಶ್ರಿತ ಕತೆಗಳ ಮಾಲಿಕೆಯಲ್ಲಿ ಇದು ನಮ್ಮ ಕೊನೆಯ ಕತೆ .
ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ ?
ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ .
Saturday May 18, 2019
ಹಾರುವ ಬಿಳಿ ಆನೆ ಹಾಗೂ ಸ್ವರ್ಗಕ್ಕೊಂದು ಪ್ರವಾಸ
Saturday May 18, 2019
Saturday May 18, 2019
" ಬಿಳಿ ಆನೆಯ ಕತೆ " , ಭಾರತೀಯ ಜನಪದದಲ್ಲಿ ವಿವಿಧ ಆವೃತ್ತಿಗಳಲ್ಲಿ ಜನಪ್ರಿಯವಾಗಿರುವ ಕತೆ. ಹಾಸ್ಯ , ಪುರಾಣ ಮಿಶ್ರಿತವಾಗಿರುವ ಈ ಕತೆ ಮಕ್ಕಳಿಗೆ ಬಹಳ ಇಷ್ಟ . ಶಂಕರ , ಅನ್ನುವ ಮುಗ್ಧ ರೈತ , ಸ್ವರ್ಗದಿಂದ ಇಳಿದು ಬಂದ ಆನೆಯ ಬಾಲ ಹಿಡಿದು ಸ್ವರ್ಗಕ್ಕೆ ಒಂದು ಟ್ರಿಪ್ ಹೊಡೆದಿದ್ದೆ ತಡ , ಒಬ್ಬರಿಂದ ಇನ್ನೊಬ್ಬರಿಗೆ ಆ ಸುದ್ದಿ ಹರಡಿ ದೊಡ್ಡ ಹಿಂಡೇ ಸ್ವರ್ಗಕ್ಕೆ ಹೊರಡಲು ಸಿದ್ಧವಾಗುತ್ತೆ . ಮುಂದೆ ಆಗುವ ಅವಾಂತರವನ್ನು ಅಪರ್ಣ ನರೇಂದ್ರ ಅವರ ಧ್ವನಿಯಲ್ಲಿ ಕೇಳಿ .
This story is a hilarious adaptation of an innocent farmer making a trip to heaven by holding the tail of the white elephant visiting his farm. Listen to the hilarious sequence of events that happens when he tells of this experience to his friends.
Friday May 10, 2019
ಅಕ್ಬರ್ ಹಾಗು ಸನ್ಯಾಸಿ ( Akbar and the saint )
Friday May 10, 2019
Friday May 10, 2019
Sometimes the feeling of previlege can make us lose empathy. It can affect kings and emperors too, as we see in this story.
As we see in this story, when Akbar shows his power on a helpless Saint, it takes a few reminders to realize all humans are same.
ಅಧಿಕಾರ, ಅಹಂಕಾರಗಳು ಎಂತವರನ್ನೂ ಕರುಣೆ , ಮರ್ಯಾದೆ ಕಳೆದುಕೊಂಡವರನ್ನಾಗಿ ಮಾಡಬಲ್ಲದು . ಇಡೀ ಉತ್ತರ ಭಾರತದ ರಾಜನಾಗಿದ್ದ ಅಕ್ಬರನನ್ನೊ ಕೂಡ .
ಧ್ಯಾನದಲ್ಲಿದ್ದ ಸನ್ಯಾಸಿಯನ್ನು ಕೀಳಾಗಿ ಕಂಡ ಅಕ್ಬರನಿಗೆ ಬೀರಬಲ್ಲ ಎಲ್ಲ ಮನುಷ್ಯರೂ ಒಂದೇ ಅನ್ನೋದನ್ನು ಸರಳ ಪ್ರಶ್ನೆಗಳಲ್ಲಿ ಮನವರಿಕೆ ಮಾಡಿ ಕೊಟ್ಟಿದ್ದನ್ನು ಈ ಕತೆಯಲ್ಲಿ ಕೇಳೋಣ .
Saturday May 04, 2019
ಬೀರ್ಬಲ್ ಹಾಗೂ ಹೊಟ್ಟೆಕಿಚ್ಚಿನ ಸೈನಿಕ
Saturday May 04, 2019
Saturday May 04, 2019
"Have more than you show, Speak less than you know" ಅನ್ನೋ ಇಂಗ್ಲಿಷ್ ಗಾದೆ ನೀವು ಕೇಳಿರಬಹುದು ಅಲ್ಲವೆ ? ನಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದು ನಮ್ಮ ಸಮಾಜಕ್ಕೆ ಅಂಟಿದ ಪಿಡುಗು . ಹೋಲಿಕೆಯಿಂದ ಕೆಲವು ಸಲ ಖುಷಿ ಸಿಗಬಹುದಾದರೂ ಬಹಳ ಸಲ ದುಃಖವೇ ಹೆಚ್ಚು .
ಈ ಸಲದ ಕತೆಯಲ್ಲೂ ಬೀರ್ಬಲ್ ನ ಬುದ್ದಿವಂತಿಕೆ ಹಾಗು ಜನಪ್ರಿಯತೆಯ ಬಗ್ಗೆ ಅಸೂಯೆಯಿಂದ ಸೈನಿಕನೊಬ್ಬ ಅಕ್ಬರ್ ನ ಹತ್ತಿರ ಹೋಗುತ್ತಾನೆ . ಅಕ್ಬರ್ ಸೈನಿಕನಿಗೆ ಬೀರ್ಬಲ್ ನ ಕಾರ್ಯಕ್ಷಮತೆ ಏಕೆ ಉತ್ತಮ ಅನ್ನೋದನ್ನ ತೋರಿಸಲು ಒಂದು ಸಣ್ಣ ಪರೀಕ್ಷೆ ಒಡ್ಡುತ್ತಾನೆ . ಕೊನೆಯಲ್ಲಿ ಸೈನಿಕನಿಗೆ ಅರಿವಾಗುತ್ತದೆ .
Friday Apr 26, 2019
ಅಕ್ಬರ್ ಬೀರ್ಬಲ್ ಕತೆಗಳು - ಮಗುವಾಗಿ ಬೀರಬಲ್
Friday Apr 26, 2019
Friday Apr 26, 2019
ಮಕ್ಕಳ ಥರ ಆಡೋದು ಅನ್ನೋದನ್ನ ಎಲ್ರೂ ಕೇಳಿರ್ತೀವಿ ಅಲ್ವೇ ? ಸಣ್ಣ ವಿಷಯಕ್ಕೆ ಹಠ ಮಾಡೋದು , ಅಳೋದು , ಇತ್ಯಾದಿ . ಈ ರೀತಿ ಮಕ್ಕಳ ವರ್ತನೆ ದೊಡ್ಡವರನ್ನಂತೂ ಭಾರಿ ಪೇಚಾಟಕ್ಕೆ ಸಿಲುಕಿಸುತ್ತೆ . ಒಂದು ಕಡೆ ಸಿಟ್ಟು , ಇನ್ನೊಂದು ಕಡೆ ಗೊಂದಲ ಹೀಗೆ ದೊಡ್ಡವರ ವರ್ತನೆಯೂ ಮಕ್ಕಳ ವರ್ತನೆಯಿಂದ ಏರು ಪೇರಾಗುತ್ತೆ . ಮಕ್ಕಳ ಹಠ ಅಂದ್ರೆ ತೀರಾ ಕೇವಲ ಅಂದುಕೊಂಡಿದ್ದ ಅಕ್ಬರನಿಗೆ ಬೀರ್ಬಲ್ ಹೇಗೆ ಪಾಠ ಕಳಿಸಿದ ಅಂತ ಈ ಸಲ ಕತೆಯಲ್ಲಿ ಕೇಳೋಣ ?
Friday Apr 19, 2019
ನಾಸ್ರುದ್ದೀನ್ ಹೂಡ್ಜ ಕಥೆಗಳು - ಚಕ್ಕುಲಿ ವಾಸನೆಯ ಬೆಲೆ
Friday Apr 19, 2019
Friday Apr 19, 2019
How much would you pay for a snack ? 10 Rupees ? 100 Rupees ? Now how much would you pay for the smell of the snack ? Sounds ridiculous right ? This is what happened to a man who was passing by a snack store and stopped because of the wonderful smell coming out of that store. Lets listen to how Hodja helped him pay the price when the store owner demanded money for 'smelling' from his snack shop.
ಅಂಗಡಿಯಲ್ಲಿ ಚಕ್ಕುಲಿ ಕೊಂಡು ಕೊಂಡ್ರೆ ಎಷ್ಟು ಬೆಲೆ ಕೊಡಬಹುದು ? 10 ರೂಪಾಯಿ ? 100 ರೂಪಾಯಿ ? ಆದ್ರೆ ಅಂಗಡಿಯವ ಬರಿಯ ಚಕ್ಕುಲಿ ವಾಸನೆಗೆ ದುಡ್ಡು ಕೊಡು ಅಂದ್ರೆ ನಿಮಗೆ ಹೇಗನ್ನಿಸಬಹು ? ಹೌದು ವಿಚಿತ್ರ ಅನ್ನಿಸುತ್ತೆ ಅಲ್ವಾ ? ಈ ಕತೆಯಲ್ಲಿ ಹೀಗಾದ ಮನುಷ್ಯ ಒಬ್ಬನಿಗೆ ಹೂಡ್ಜ ಹೇಗೆ ನ್ಯಾಯ ಕೊಡಿಸಿದ ಅನ್ನೋದನ್ನ ಕೇಳೋಣ .