Feed on
Posts

ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ .  

ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ . 

ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ  ಮೂರು ಕತೆಗಳನ್ನು  ಕೇಳೋಣ .

 

 

ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ .  ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ .  ಆದರೆ , ಸಾವಿರಾರು ವರ್ಷಗಳ ಹಿಂದೆಯೇ  ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ ,  ಸಿಡಿಲನ್ನು ಚೂಟಿ ಟಗರಿಗೂ ,  ಗೂಡುಗನ್ನು  ಮಗನನ್ನು ಸರಿ ಹಾದಿಗೆ  ತರುವ ಅಮ್ಮನಿಗೂ  ಹೋಲಿಸುವ  ಮೂಲಕ ಕೇಳುವುದಕ್ಕೆ  ವಿಶಿಷ್ಟ  ಅನುಭವ  ಕೊಡುತ್ತದೆ . 

 

Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs.  A unique story. 

ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ  ಮನುಷ್ಯ  ಒಬ್ಬ  ಬದುಕಿದ್ದ  ಅಂದರೆ ಆಶ್ಚರ್ಯ  ಆಗುತ್ತೆ  ಅಲ್ವಾ ? 

ಈ ಕತೆಯಲ್ಲಿ ಆ ಮನುಷ್ಯನನ್ನ  ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ 

ಕಳೆದ  ವಾರ ಇದೇ  ಕತೆಯ ಸರಳ  ಗನ್ನಡ  ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ . 

ನೀವೂ , ನಾವೂ ಕೇಳಿ  ಮಜಾ ತಗಳ್ಳೋಣಾಂತ ? ಏನಂತೀರಿ ? 

ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ  ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ  ತೋಳಕ್ಕೆ ನರಿಯ ಸ್ಥಾನ .  

ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ  ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ . 

ಆಫ್ರಿಕಾದಲ್ಲಿ  ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ  ಹತ್ತು  ಹಲವು  ರೀತಿಯಲ್ಲಿ .  ಅಡುಗೆಯಂತೂ  ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು  ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ  ಬಿಂದಿಗೆಯಾಗಿ , ಸಾಮಗ್ರಿ  ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ . 

ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ .  

ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ  ರೋಚಕ ಕತೆ ಕೇಳೋಣ . 

ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು  ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ  ಈ ಕತೆ 

ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು  ಅರ್ಥ ಮಾಡಿಕೊಂಡ  ಬಗೆಯನ್ನು  ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ .  

ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?  ಹೆಚ್ಚು ತಿಳಿಯಲು  ಈ ವಾರದ ಕತೆ ಕೇಳಿ . 

"ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ .  ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ . 

 

ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ . 

ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ  ನಿರೂಪಿಸಿರುವ ರಾಜನೊಬ್ಬನ  ಕತೆ .  ರಾಜನಿಗೆ ಏನು ಮಾಡಿದರೂ ರಾತ್ರಿ  ನಿದ್ರೆ ಬರುತ್ತಿರಲಿಲ್ಲ .  ಎಷ್ಟೇ ಮದ್ದು , ಗುಳಿಗೆ  ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ  ಉಳಿದಿತ್ತು . 

ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ   ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ? 

 

"ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು . 

- Older Posts »

Play this podcast on Podbean App