Episodes
Sunday Jul 18, 2021
Ep131 - ಬಣ್ಣದ ಪ್ರಾಣಿ
Sunday Jul 18, 2021
Sunday Jul 18, 2021
ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು . ದುಬಾರಿಯಾದ ಆಟದ ಸಾಮಾನಿರಲಿ , ಮೂಲೆಯಲ್ಲಿ ಬಿದ್ದಿರೋ ಕಲ್ಲಿರಲಿ , ಮಕ್ಕಳಿಗೆ ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ .
ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು . ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು .
ಪ್ರಾಣಿಯನ್ನು ಮಕ್ಕಳು ಏನು ಮಾಡಿದರು ? ಬನ್ನಿ , ಈ ಕತೆಯಲ್ಲಿ ತಿಳಿಯೋಣ .
Sunday Jul 11, 2021
ಹನುಮಂತನ ಚಿಟಿಕೆ
Sunday Jul 11, 2021
Sunday Jul 11, 2021
ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ? ಹೌದು .. ರಾಮಾಯಣದ ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .
Saturday Jul 03, 2021
ಕಾಗೆ ಮರಿ ಹಾಗೂ ಹಂಸದ ಕತೆ
Saturday Jul 03, 2021
Saturday Jul 03, 2021
ಕಾಡಿನಲ್ಲಿ ವಾಸ ಆಗಿದ್ದ ಕಾಗೆ ಮರಿಗೆ ನೀರಿನಲ್ಲಿ ಈಜುತ್ತಿದ್ದ ಬೆಳ್ಳಗೆ ಸುಂದರವಾಗಿದ್ದ ಹಂಸವನ್ನ ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು .
ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ? ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ ಈ ಪುಟ್ಟ ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು .
Sunday Jun 27, 2021
ನೀಲಿ ಮರಿ ಆನೆ - ಗೆಳೆತನದ ಬಗ್ಗೆ ಒಂದು ಕತೆ
Sunday Jun 27, 2021
Sunday Jun 27, 2021
ಕಾಡಿನಲ್ಲಿ ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ ಬಣ್ಣ ಇತ್ತು !. ಆ ಬಣ್ಣದ ಜತೆ ಕಾಡಿನಲ್ಲಿ ಬೇರೆ ಮರಿಗಳ ಜತೆ ಬೇರೆಯೋಕೆ ಈ ಆನೆ ಮರಿಗೆ ಸಾಧ್ಯ ಆಯಿತೇ ?
Sunday Jun 20, 2021
ಕೆಂಪು ಕಾರು - ಸೇವಾ ಮನೋಭಾವದ ಬಗ್ಗೆ ಒಂದು ಕತೆ
Sunday Jun 20, 2021
Sunday Jun 20, 2021
ರಕ್ಷಿತ್ ಗೆ ಕಾರುಗಳು ಅಂದರೆ ತುಂಬಾ ಇಷ್ಟ. ಒಂದು ದಿವಸ ಅವನ ಅಮ್ಮ ಅವನಿಷ್ಟದ ಕೆಂಪು ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ ದಾನ ಮಾಡಿದಾಗ ರಕ್ಷಿತ್ ಗೆ ಆದ ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು ಮಾಡಿದ ? ಬನ್ನಿ ಈ ಕತೆ ಕೇಳಿ ತಿಳಿದುಕೊಳ್ಳೋಣ
Sunday Jun 06, 2021
ರೋಹಿತನ ಸಾಹಸ - ಒಂದು "ಸಾಹಸಮಯ" ಕತೆ
Sunday Jun 06, 2021
Sunday Jun 06, 2021
” ಕೇಳಿರೊಂದು ಕಥೆಯ ” ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು ಮಾಡಿದ್ದೆವು .
ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ ಈ ವಾರದ ಕತೆ “ರೋಹಿತನ ಸಾಹಸ ” . ಹೊರಗೆ ಜೋರಾಗಿ ಬೀಳುತ್ತಿದ್ದ ಮಳೆಯಲ್ಲಿ ಯಾವುದೋ ಪ್ರಾಣಿ ಕೂಗುವ ಸದ್ದು ಕೇಳಿಸ್ತು . ಮನೆಯಲ್ಲಿ ಬೇಜಾರು ಮಾಡಿಕೊಂಡು ಕುಳಿತಿದ್ದ ರೋಹಿತ್ ಆಗ ಏನು ಮಾಡಿದ ?
ಕೇಳಿ ಈ ರೋಚಕ ಕಥೆ
Sunday May 30, 2021
ಹೂದಾನಿ - ಧೈರ್ಯದ ಬಗ್ಗೆ ಒಂದು ಕತೆ
Sunday May 30, 2021
Sunday May 30, 2021
" ಕೇಳಿರೊಂದು ಕಥೆಯ " ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು ಮಾಡಿದ್ದೆವು .
ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ ಈ ವಾರದ ಕತೆ "ಹೂದಾನಿ " . ತೇಜಸ್ , ಅಂಕಿತ್ ಹಾಗೂ ದಿವ್ಯ ಮನೆಯಲ್ಲಿ ಆಟ ಆಡ್ತಿದ್ದಾಗ ಮನೆಯಲ್ಲಿದ್ದ ಹೂದಾನಿ ( Flower Vase ) ಬಿದ್ಧು ಹೋಗತ್ತೆ . ಆಗ , ಆ ಮಕ್ಕಳೇನು ಮಾಡಿದರು . ಕೇಳಿ ಈ ಕುತೂಹಲಕಾರಿ ಕಥೆ .
Saturday May 15, 2021
[summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು
Saturday May 15, 2021
Saturday May 15, 2021
ಮರಳುಗಾಡಿನಲ್ಲಿ ವಾಸ ಮಾಡೋ ಒಂಟೆ ಅಸಾಮಾನ್ಯ ಪ್ರಾಣಿ . ದಿನಗಟ್ಟಲೆ ನೀರಿಲ್ಲದೆ ಬಿಸಿಲಿನಲ್ಲಿ ಇರುವ ಶಕ್ತಿ ಇರುವ ಈ ಪ್ರಾಣಿಯ ಬಗ್ಗೆ ನಮ್ಮ ಪುಟಾಣಿ ಕೇಳಿಗಾರ್ತಿ ಪ್ರಖ್ಯಾ ಇನ್ನಷ್ಟು ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಿಸಿದ್ದಾಳೆ .
Thursday May 13, 2021
[special episode] - ಈದ್ ಹಬ್ಬ ಹಾಗೂ ರಂಜಾನ್ ವಿಶೇಷ
Thursday May 13, 2021
Thursday May 13, 2021
ಈದ್ ಹಬ್ಬ ಮುಸಲ್ಮಾನರು ಆಚರಣೆ ಮಾಡುವ ಮಹತ್ವದ ಹಬ್ಬಗಳಲ್ಲೊಂದು . ರಂಜಾನ್ ತಿಂಗಳಲ್ಲಿ ಬರುವ ಈ ಹಬ್ಬದ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ !
Saturday May 08, 2021
[summerofstories] -Tanay narrating " ಪಾರಿವಾಳ ಮತ್ತು ಇರುವೆ"
Saturday May 08, 2021
Saturday May 08, 2021
4 ವರ್ಷದ ಪುಟ್ಟ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸುವ " ಪಾರಿವಾಳ ಮತ್ತು ಇರುವೆಯ " ಕತೆ .
ಇದರ ಮೂಲ ಕತೆ ಇಲ್ಲಿ ಕೇಳಬಹುದು - https://kelirondukatheya.org/ep95/